ಬೆಂಗಳೂರು : ಕರ್ನಾಟಕ ಬಂದ್ ಬಳಿಕ ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಮ್ಯಾಟ್ನಿ ಶೋ ಆರಂಭವಾಗಿದೆ.
ಬೆಂಗಳೂರಿನ ನರ್ತಕಿ, ವೀರೇಶ್ ಥಿಯೇಟರ್ ನಲ್ಲಿ ಮಧ್ಯಾಹ್ನದ ಮ್ಯಾಟ್ನಿ ಶೋ ಆರಂಭವಾಗಿದೆ. ಬಂದ್ ಹಿನ್ನೆಲೆ ಮಾರ್ನಿಂಗ್ ಶೋ ರದ್ದುಪಡಿಸಲಾಗಿತ್ತು, ಇದೀಗ ಬಂದ್ ಬಳಿಕ ಮ್ಯಾಟ್ನಿ ಶೋ ಆರಂಭವಾಗಿದೆ. ಆದರೆ ಬಂದ್ ಹಿನ್ನೆಲೆ ಬೆರಣಿಕೆಯಷ್ಟು ಪ್ರೇಕ್ಷಕರು ಮಾತ್ರ ಥಿಯೇಟರ್ ನತ್ತ ಧಾವಿಸಿದ್ದಾರೆ.
ಕನ್ನಡಿಗರ ಮೇಲೆ ಹಲ್ಲೆ, ದೌರ್ಜನ್ಯ, ಮರಾಠಿ ಪುಂಡರಿಂದ ಕೆ.ಎಸ್.ಆರ್.ಟಿ.ಸಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಖಂಡಿಸಿ ಹಾಗೂ ಮೇಕೆದಾಟು ಸೇರಿದಂತೆ ಹಲವು ನೀರಾವರಿ ಯೋಜನೆ ಜಾರಿಗೆ ಆಗ್ರಹಿಸಿ ಕನ್ನಡ ಪರ ಸಂಘಟನೆ ಹೋರಾಟಗಾರ ವಾಟಾಳ್ ನಾಗರಾಜ್ ಅಖಂಡ ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ.