ದಕ್ಷಿಣ ಕೊರಿಯಾದ ಪಶ್ಚಿಮ ಕರಾವಳಿಯಲ್ಲಿ ಯುಎಸ್ ಎಫ್ -16 ಫೈಟರ್ ಜೆಟ್ ಬುಧವಾರ ಸಮುದ್ರಕ್ಕೆ ಅಪ್ಪಳಿಸಿದ್ದು, ಪೈಲಟ್ ಅನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಯೋನ್ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪಶ್ಚಿಮ ಕರಾವಳಿ ನಗರ ಗುನ್ಸಾನ್ ನಲ್ಲಿ ಈ ಘಟನೆ ನಡೆದಿದೆ ಎಂದು ಮಿಲಿಟರಿ ಮೂಲಗಳನ್ನು ಉಲ್ಲೇಖಿಸಿ ಯೋನ್ಹಾಪ್ ವರದಿ ಮಾಡಿದೆ. ದಕ್ಷಿಣ ಕೊರಿಯಾದಲ್ಲಿ ಯುಎಸ್ ಮಿಲಿಟರಿ ಬಳಸುವ ಎರಡು ಪ್ರಮುಖ ವಾಯುನೆಲೆಗಳಲ್ಲಿ ಗುನ್ಸಾನ್ ನೆಲೆಯಾಗಿದೆ.