ಬೆಂಗಳೂರು : ಮುಖ್ಯಮಂತ್ರಿಯ ಸಿದ್ದರಾಮಯ್ಯರ ಕಾನ್ವೆಗೆ ಎದುರಾಗಿ ಏಕಮುಖ ಸಂಚಾರ ಮಾರ್ಗದಲ್ಲಿ ಕಾರು ಚಲಾಯಿಸಿದ ಶಾಸಕ ಜನಾರ್ಧನ ರೆಡ್ಡಿ ಅವರ ವರ್ತನೆ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಇದೀಗ ಜನಾರ್ಧನ ರೆಡ್ಡಿಗೆ ಸೇರಿದ ರೇಂಜ್ ರೋವರ್ ಕಾರನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.ನಿಯಮ ಉಲ್ಲಂಘಿಸಿದ ಮೂರು ಕಾರುಗಳ ಮೇಲೆ ಎಫ್ ಐ ಆರ್ ದಾಖಲಾಗಿದ್ದು, ಮೂರು ಕಾರುಗಳನ್ನು ಕೂಡ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಕಾರು ಜಪ್ತಿ ಮಾಡಿ ಪೊಲೀಸರು ಗಂಗಾವತಿಗೆ ತಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಕೊಪ್ಪಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭದ್ರತಾ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇರೆಗೆ ಶಾಸಕ ಜನಾರ್ಧನರೆಡ್ಡಿಗೆ ಕೊಪ್ಪಳ ಪೊಲೀಸರು ನೋಟಿಸ್ ಕೂಡ ಜಾರಿ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇತ್ತೀಚೆಗೆ ಗಂಗಾವತಿ ಮಾರ್ಗವಾಗಿ ಬಳ್ಳಾರಿಗೆ ತೆರಳುವ ವೇಳೆ ನಿರ್ಬಂಧವಿದ್ದರೂ ಸಹ ನಿಯಮ ಉಲ್ಲಂಘಿಸಿ ಶಾಸಕ ಜನಾರ್ದನ ರೆಡ್ಡಿಯವರಿಗೆ ಸೇರಿದ ಕಾರು ಸಿಎಂ ಬೆಂಗಾವಲು ವಾಹನಗಳ ಎದುರುಗಡೆಯಿಂದ ಚಲಾಯಿಸಿದ್ದು, ಈ ಕುರಿತಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶಾಸಕ ಜನಾರ್ದನ ರೆಡ್ಡಿಯವರೇ ಖುದ್ದು ಸಿಎಂ ಬೆಂಗಾವಲು ವಾಹನಗಳ ಎದುರುಗಡೆಯಿಂದ ತಮ್ಮ ಕಾರು ಚಲಾಯಿಸಿರುವುದು ಸೆರೆಯಾಗಿತ್ತು.