ಬೆಂಗಳೂರು : ಮನೆಯೂಟದ ನಿರೀಕ್ಷೆಯಲ್ಲಿದ್ದ ನಟ ದರ್ಶನ್ ಗೆ ಶಾಕ್ ಎದುರಾಗಿದ್ದು ಜೈಲಾಧಿಕಾರಿಗಳು ದರ್ಶನ್ ಗೆ ಮನೆಯೂಟ ನಿರಾಕರಿಸಿದ್ದಾರೆ.
ನಟ ದರ್ಶನ್ ಗೆ ಆರೋಗ್ಯ ಸರಿ ಇದೆ, ಮನೆಯೂಟದ ಅವಶ್ಯಕತೆ ಇಲ್ಲ ಎಂದು ಜೈಲಾಧಿಕಾರಿಗಳು ಹೈಕೋರ್ಟ್ ಗೆ ವರದಿ ಸಲ್ಲಿಕೆ ಮಾಡಿದ್ದಾರೆ. ದರ್ಶನ್ ಗೆ ಮನೆಯೂಟ ನೀಡುವ ಬಗ್ಗೆ 10 ದಿನಗಳಲ್ಲಿ ನಿರ್ಧಾರ ತೆಗೆದುಕೊಂಡು ವರದಿ ಸಲ್ಲಿಸುವಂತೆ ಹೈಕೋರ್ಟ್ ಇತ್ತೀಚೆಗೆ ಹೇಳಿತ್ತು. ಈ ಮೂಲಕ ನಟ ದರ್ಶನ್ ಗೆ ಜೈಲೂಟವೇ ಗತಿಯಾಗಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಹಾಗೂ ಗ್ಯಾಂಗ್ ಗೆ ನ್ಯಾಯಾಂಗ ಬಂಧನ ಅವಧಿ ಮತ್ತೆ ವಿಸ್ತರಣೆಯಾಗಿದ್ದು, ಆರೋಪಿಗಳಿಗೆ ಜೈಲುವಾಸವೇ ಗತಿಯಾಗಿದೆ. ಎಲ್ಲಾ 17 ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ಆಗಸ್ಟ್ 14ರವರೆಗೆ ವಿಸ್ತರಿಸಿ ಆದೇಶ ನೀಡಿದೆ.