ಬೆಳ್ಳಂ ಬೆಳಗ್ಗೆ ಟಾಲಿವುಡ್ ಗೆ ‘IT’ ಶಾಕ್ ಎದುರಾಗಿದ್ದು, ದಿಲ್ ರಾಜು ಮನೆ ಸೇರಿ ಹಲವು ಕಡೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ನಟ ರಾಮ್ ಚರಣ್ ಅಭಿನಯದ ʻಗೇಮ್ ಚೇಂಜರ್ʼ ಖ್ಯಾತಿಯ ನಿರ್ಮಾಪಕ ದಿಲ್ ರಾಜುಗೆ ಐಟಿ ಶಾಕ್ ಎದುರಾಗಿದ್ದು, ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.
ಹೈದರಾಬಾದ್ನ ಜೂಬ್ಲಿಹಿಲ್ಸ್, ಬಂಜಾರಹಿಲ್ಸ್ನಲ್ಲಿರುವ ನಿವಾಸಗಳ ಮೇಲೆಹಾಗೂ ಸಂಬಂಧಿಕರ ಮನೆಗಳ ಮೇಲೂ ಐಟಿ ದಾಳಿ ನಡೆಸಿದ್ದು, ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದೆ.
ಪುಷ್ಪ-2 ಸಿನಿಮಾ ನಿರ್ಮಾಣ ಸಂಸ್ಥೆ ಮೇಲೂ ಐಟಿ ದಾಳಿ ನಡೆದಿದೆ. ಹಾಗೂ ಟಾಲಿವುಡ್ ನ ಹಲವು ಸಿನಿಮಾ ನಿರ್ಮಾಪಕರು, ಹಾಗೂ ನಿರ್ದೇಶಕರಿಗೆ ಐಟಿ ಅಧಿಕಾರಿಗಳು ಬೆಳ್ಳಂ ಬೆಳಗ್ಗೆ ಚಳಿ ಬಿಡಿಸಿದ್ದಾರೆ.
ಒಟ್ಟು 55 ಐಟಿ ಅಧಿಕಾರಿಗಳ ತಂಡಗಳು ನಿರ್ಮಾಪಕ ದಿಲ್ ರಾಜು ಅವರ ಮನೆ, ಕಚೇರಿ ಸೇರಿದಂತೆ 8 ಸ್ಥಳಗಳಲ್ಲಿ ದಾಳಿ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.