ಬೆಂಗಳೂರು : ಕ್ರಷರ್ ಮಾಲೀಕನ ಮನೆ ಮೇಲೆ ಐಟಿ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಬರೋಬ್ಬರಿ 1 ಕೋಟಿ ಹಣ, 800 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿಕೊಂಡಿದ್ದಾರೆ.
ಕ್ರಷರ್ ಮಾಲೀಕ ಲೋಕೇಶ್ ಎಂಬುವವರ ಮೇಲೆ ದಾಳಿ ನಡೆದಿದೆ. ಬೆಂಗಳೂರಿನ ಕೆ.ಆರ್.ಪುರಂ ಕ್ಷೇತ್ರದ ಬಿಜೆಪಿ ಶಾಸಕ ಭೈರತಿ ಬಸವರಾಜ್ ಅವರ ಆಪ್ತ ಸಹಾಯಕ ಮಂಜುನಾಥ್ ಎಂಬುವವರ ಅಳಿಯ ಆಗಿರುವ ಲೋಕೇಶ್, ಕೆಲದಿನಗಳ ಹಿಂದೆ ಗಡಿಭಾಗದ ಚೆಕ್ ಪೋಸ್ಟ್ ನಲ್ಲಿ 10 ಲಕ್ಷ ಹಣದ ಜೊತೆ ಸಿಕ್ಕಿಬಿದ್ದಿದ್ದರು. ಈ ಅನುಮಾನದಿಂದ ಐಟಿ ಇಲಾಖೆ ಇಂದು ದಾಳಿ ನಡೆಸಿದೆ. ಡಿಡಿ ವಿಷ್ಣುಪ್ರಸಾದ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಬರೋಬ್ಬರಿ 1 ಕೋಟಿ ಹಣ, 800 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.