ಗಾಝಾ ಪಟ್ಟಿಯ ನುಸೆರಾತ್ ಶಿಬಿರದಲ್ಲಿ ಸ್ಥಳಾಂತರಗೊಂಡ ಜನರ ಶಾಲೆಯನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 30 ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ, ಅವರಲ್ಲಿ ಹೆಚ್ಚಿನವರು ಮಕ್ಕಳು ಮತ್ತು ಮಹಿಳೆಯರು ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಇಸ್ರೇಲಿ ಫೈಟರ್ ಜೆಟ್ ಹಲವಾರು ಕ್ಷಿಪಣಿಗಳಿಂದ ಕನಿಷ್ಠ ಮೂರು ತರಗತಿ ಕೊಠಡಿಗಳ ಮೇಲೆ ಬಾಂಬ್ ದಾಳಿ ನಡೆಸಿದೆ.
ಶಾಲೆಯ ಮೇಲೆ ಇಸ್ರೇಲ್ ನಡೆಸಿದ ದಾಳಿಯನ್ನು “ಭಯಾನಕ ಹತ್ಯಾಕಾಂಡ” ಎಂದು ಹಮಾಸ್ ನಡೆಸುತ್ತಿರುವ ಗಾಝಾ ಸರ್ಕಾರಿ ಮಾಧ್ಯಮ ಕಚೇರಿ ಹೇಳಿಕೆಯಲ್ಲಿ ಖಂಡಿಸಿದೆ, ಇಸ್ರೇಲಿ ಸೇನೆಯು ಈ ದಾಳಿಗಳನ್ನು ನಿರಂತರವಾಗಿ ಅನುಷ್ಠಾನಗೊಳಿಸುತ್ತಿರುವುದು “ನಾಗರಿಕರ ವಿರುದ್ಧ ನಡೆದ ನರಮೇಧದ ಅಪರಾಧದ ಸ್ಪಷ್ಟ ಪುರಾವೆಯಾಗಿದೆ” ಎಂದು ಹೇಳಿದೆ.ಮಾನವೀಯತೆಗೆ ಅಪಾಯವನ್ನುಂಟುಮಾಡುವ ಮತ್ತು ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುವ ಈ ಅಪರಾಧಗಳಿಗೆ ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ ಸಂಪೂರ್ಣ ಜವಾಬ್ದಾರಿಯನ್ನು ಹೊರಬೇಕು ಎಂದು ಕಚೇರಿ ಹೇಳಿದೆ.