ದಕ್ಷಿಣ ಲೆಬನಾನ್ ಅನ್ನು ಗುರಿಯಾಗಿಸಿಕೊಂಡು ಸೆಪ್ಟೆಂಬರ್ 23 ರ ಸೋಮವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 50 ಜನರು ಸಾವನ್ನಪ್ಪಿದ್ದಾರೆ ಮತ್ತು ಮಕ್ಕಳು, ಮಹಿಳೆಯರು ಮತ್ತು ವೈದ್ಯಕೀಯ ಸಿಬ್ಬಂದಿ ಸೇರಿದಂತೆ 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ವರದಿ ಮಾಡಿದೆ.
ಇದಕ್ಕೂ ಮುನ್ನ ಇಸ್ರೇಲ್ ಸೇನೆಯು ಲೆಬನಾನ್ ನಾದ್ಯಂತ ಸುಮಾರು 300 ಗುರಿಗಳ ಮೇಲೆ ದಾಳಿ ನಡೆಸಿದೆ ಎಂದು ಹೇಳಿತ್ತು. ಕಫರ್ ಹಟ್ಟಾ, ಬಬ್ಲಿಯೆಹ್, ಕವ್ತಾರಿಯೆಹ್ ಅಲ್-ಸಯ್ಯದ್ ಮತ್ತು ಅಲ್-ಘಸ್ಸಾನಿಯಾದಲ್ಲಿ ಗಾಯಗಳಾಗಿವೆ ಮತ್ತು ಬಬ್ಲಿಯೆಹ್ ಮತ್ತು ಸರಾಫಂಡ್ ಪಟ್ಟಣಗಳಲ್ಲಿನ ಎರಡು ವಸತಿ ಕಟ್ಟಡಗಳನ್ನು ಗುರಿಯಾಗಿಸಿಕೊಂಡಿವೆ ಎಂದು ಅಲ್ಜಜೀರಾ ವರದಿ ಮಾಡಿದೆ.
ಲೆಬನಾನ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ
ದಕ್ಷಿಣ ಲೆಬನಾನ್ ನಿವಾಸಿಗಳು ತಮ್ಮ ಪಟ್ಟಣಗಳ ಮೇಲೆ ದಾಳಿ ನಡೆಯುತ್ತಿರುವುದನ್ನು ತೋರಿಸುವ ವೀಡಿಯೊಗಳು ಮತ್ತು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಇಸ್ರೇಲ್ ತಮ್ಮ ಆಸ್ಪತ್ರೆಗಳು, ಶಾಲೆಗಳು ಮತ್ತು ಇತರ ವೈದ್ಯಕೀಯ ಸೌಲಭ್ಯಗಳ ಮೇಲೆ ದಾಳಿ ನಡೆಸಿದೆಯೇ ಹೊರತು ಮಿಲಿಟರಿ ಗುರಿಗಳ ಮೇಲೆ ಅಲ್ಲ ಎಂದು ಲೆಬನಾನ್ ನಾಗರಿಕರು ಹೇಳಿದ್ದಾರೆ.