ಸಿರಿಯಾ : ಪಶ್ಚಿಮ ಏಷ್ಯಾದ ದೇಶ ಸಿರಿಯಾದಲ್ಲಿ ಐಸಿಸ್ ಉಗ್ರರು ಅಟ್ಟಹಾಸ ಮೆರೆದಿದ್ದು, ಉಗ್ರರ ದಾಳಿಯಲ್ಲಿ 18 ಮಂದಿ ಸಾವನ್ನಪ್ಪಿದ್ದು, 50 ಜನರ ಕಾಣೆಯಾಗಿದ್ದಾರೆ
ಐಸಿಸ್ ಭಯೋತ್ಪಾದಕರು ಬುಧವಾರ ಪೂರ್ವ ಸಿರಿಯಾದಲ್ಲಿ ಗ್ರಾಮಸ್ಥರ ಮೇಲೆ ಗುಂಡು ಹಾರಿಸಿದ್ದಾರೆ. ಈ ಹಠಾತ್ ದಾಳಿಯಲ್ಲಿ 18 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ದಾಳಿಯಲ್ಲಿ 16 ಮಂದಿ ಗಾಯಗೊಂಡಿದ್ದಾರೆ. ಈ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಅದೇ ಸಮಯದಲ್ಲಿ, ಈ ದಾಳಿಯ ನಂತರ 50 ಜನರು ಕಾಣೆಯಾಗಿದ್ದಾರೆ.
ಪೂರ್ವ ಸಿರಿಯಾದಲ್ಲಿ ಟ್ರಫಲ್ಗಳನ್ನು ಸಂಗ್ರಹಿಸುತ್ತಿದ್ದ ಗ್ರಾಮಸ್ಥರ ಮೇಲೆ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಉಗ್ರರು ಬುಧವಾರ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ 18 ಜನರು ಸಾವನ್ನಪ್ಪಿದ್ದರೆ, 18 ಜನರು ಗಾಯಗೊಂಡಿದ್ದರು. ಗ್ರಾಮಸ್ಥರು ಸಂಗ್ರಹಿಸುತ್ತಿದ್ದ ಟ್ರಫಲ್ ಗಳು ಹೆಚ್ಚಿನ ಬೆಲೆಗೆ ಮಾರಾಟವಾಗುವ ಕಾಲೋಚಿತ ಹಣ್ಣು. ಸಿರಿಯಾದಲ್ಲಿ ಅನೇಕ ಜನರು ಅವುಗಳನ್ನು ಸಂಗ್ರಹಿಸಲು ಹೋಗುತ್ತಾರೆ, ಏಕೆಂದರೆ ಇಲ್ಲಿನ ಜನಸಂಖ್ಯೆಯ 90 ಪ್ರತಿಶತದಷ್ಟು ಬಡತನ ರೇಖೆಗಿಂತ ಕೆಳಗಿದ್ದಾರೆ.
50 ಮಂದಿ ಅಪಹರಣ ಶಂಕೆ
ದಾಳಿಯಲ್ಲಿ ಸುಮಾರು 50 ಜನರು ಕಾಣೆಯಾಗಿದ್ದಾರೆ ಎಂದು ಬ್ರಿಟನ್ ಮೂಲದ ಸಿರಿಯನ್ ಮಾನವ ಹಕ್ಕುಗಳ ವೀಕ್ಷಣಾಲಯ ತಿಳಿಸಿದೆ. ಅವರನ್ನು ಐಸಿಸ್ ಭಯೋತ್ಪಾದಕರು ಅಪಹರಿಸಿದ್ದಾರೆ ಎಂದು ಶಂಕಿಸಲಾಗಿದೆ. ಮೃತರಲ್ಲಿ ಸರ್ಕಾರಿ ಪರ ರಾಷ್ಟ್ರೀಯ ರಕ್ಷಣಾ ಪಡೆಗಳ ನಾಲ್ವರು ಸದಸ್ಯರು ಸೇರಿದ್ದಾರೆ ಎಂದು ವೀಕ್ಷಣಾಲಯ ತಿಳಿಸಿದೆ.
44 ಮಂದಿ ಸಾವು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸರ್ಕಾರಿ ಮಾಧ್ಯಮ ಸಂಸ್ಥೆ ದಾಮಾ ಪೋಸ್ಟ್ ಪ್ರಕಾರ, ಸಾವಿನ ಸಂಖ್ಯೆ 44 ಎಂದು ವರದಿಯಾಗಿದೆ. ದಾಮಾ ಪೋಸ್ಟ್ ಪ್ರಕಾರ, ಇದು ಇಸ್ಲಾಮಿಕ್ ಸ್ಟೇಟ್ ಗುಂಪು ನಡೆಸಿದ ಅತ್ಯಂತ ಭೀಕರ ದಾಳಿಯಾಗಿದೆ. ಇರಾಕ್ ಗಡಿಯಲ್ಲಿರುವ ಪೂರ್ವ ಪ್ರಾಂತ್ಯದ ದೇರ್ ಅಲ್-ಝೌರ್ ನ ಕೊಬಾಜೆಬ್ ಪಟ್ಟಣದ ಬಳಿಯ ಮರುಭೂಮಿ ಪ್ರದೇಶದಲ್ಲಿ ಈ ದಾಳಿ ನಡೆದಿದೆ.