
ಹೌಂಗ್ಝೌ : ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಸಿಕ್ಕಿದ್ದು, ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ ಎಸ್ ಯು 5 ಸ್ಪರ್ಧೆಯಲ್ಲಿ ಭಾರತದ ತುಳಸಿಮತಿಗೆ ಚಿನ್ನದ ಪದಕ ಸಿಕ್ಕಿದೆ.
ತುಳಸಿಮತಿ ಏಷ್ಯನ್ ಪ್ಯಾರಾ ಗೇಮ್ಸ್ ಬ್ಯಾಡ್ಮಿಂಟನ್ ಮಹಿಳಾ ಸಿಂಗಲ್ಸ್ ಎಸ್ ಯು 5 ವಿಭಾಗದಲ್ಲಿ ಚೀನಾದ ಕ್ವಿಕ್ಸಿಯಾ ಯಾಂಗ್ ವಿರುದ್ಧ 2-0 ಅಂಕಗಳ ಅಂತರದಿಂದ ಗೆಲುವು ಸಾಧಿಸಿದರು.