ನವದೆಹಲಿ: ಶುಕ್ರವಾರ ಬಿಡುಗಡೆಯಾದ ಅಧಿಕೃತ ಅಂಕಿಅಂಶಗಳ ಪ್ರಕಾರ, ಭಾರತದ ಚಿಲ್ಲರೆ ಹಣದುಬ್ಬರವು ಮಾರ್ಚ್‌ನಲ್ಲಿ 5 ತಿಂಗಳ ಕನಿಷ್ಠ ಮಟ್ಟವಾದ ಶೇ. 4.85 ಕ್ಕೆ ತಗ್ಗಿದೆ.
ಗ್ರಾಹಕ ಬೆಲೆ ಸೂಚ್ಯಂಕ(CPI) ಆಧಾರಿತ ಚಿಲ್ಲರೆ ಹಣದುಬ್ಬರವು ಫೆಬ್ರವರಿಯಲ್ಲಿ ಶೇ. 5.09 ಮತ್ತು ಮಾರ್ಚ್ 2023 ರಲ್ಲಿ ಶೇ. 5.66 ರಷ್ಟು ಇತ್ತು. ಹಿಂದೆ CPI ಆಧಾರಿತ ಹಣದುಬ್ಬರವು ಅಕ್ಟೋಬರ್ 2023 ರಲ್ಲಿ ಶೇ. 4.87 ರಷ್ಟಿತ್ತು.
ರಾಷ್ಟ್ರೀಯ ಅಂಕಿಅಂಶ ಕಚೇರಿ(ಎನ್‌ಎಸ್‌ಒ) ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ ಆಹಾರ ಬುಟ್ಟಿ(Food basket)ಯಲ್ಲಿನ ಹಣದುಬ್ಬರವು ಮಾರ್ಚ್‌ನಲ್ಲಿ ಶೇ. 8.52 ರಷ್ಟಿತ್ತು, ಫೆಬ್ರವರಿಯಲ್ಲಿ ಶೇ. 8.66 ರಿಂದ ಕಡಿಮೆಯಾಗಿದೆ.
ಆರ್‌ಬಿಐ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಹಣದುಬ್ಬರವನ್ನು ಶೇಕಡ 4.9 ಮತ್ತು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇಕಡ 3.8 ಎಂದು ಅಂದಾಜಿಸಿದೆ.