ಹೌಂಗ್ಝೌ : ಏಷ್ಯನ್ ಪ್ಯಾರಾ ಗೇಮ್ಸ್ ಪುರುಷರ ಬ್ಯಾಡ್ಮಿಂಟನ್ SL-3 ಸ್ಪರ್ಧೆಯಲ್ಲಿ ಭಾರತದ ಪ್ರಮೋದ್ ಗೆ ಚಿನ್ನದ ಪದಕ ಪಡೆದರೆ, ನಿತೇಶ್ ಗೆ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ಪ್ರಮೋದ್ ಭಾಗತ್ ಪುರುಷರ ಸಿಂಗಲ್ಸ್ ಎಸ್ಎಲ್ 3 ನಲ್ಲಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದರೆ ನಿತೇಶ್ ಬೆಳ್ಳಿ ಪದಕ ಪಡೆಯುವ ಮೂಲಕ ಭಾರತದ ಖಾತೆಗೆ ಮತ್ತೆರಡು ಪದಕಗಳನ್ನು ತಂದುಕೊಟ್ಟಿದ್ದಾರೆ.
ಫೈನಲ್ ಮುಖಾಮುಖಿಯಲ್ಲಿ ಇಬ್ಬರು ದೇಶಬಾಂಧವರು ಚಿನ್ನಕ್ಕಾಗಿ ತೀವ್ರವಾಗಿ ಹೋರಾಡಿದ ಈ ಐತಿಹಾಸಿಕ ಕ್ಷಣವು ಪ್ಯಾರಾ-ಬ್ಯಾಡ್ಮಿಂಟನ್ನಲ್ಲಿ ಭಾರತದ ಮೊದಲ ಚಿನ್ನವನ್ನು ಸೂಚಿಸುತ್ತದೆ, ಇದು ಅವರ ಅಸಾಧಾರಣ ಪ್ರತಿಭೆ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ.