ಹೌಂಗ್ಜ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಭರ್ಜರಿ ಪ್ರದರ್ಶನ ಮುಂದುವರೆದಿದ್ದು, ದಿನದ ಆರಂಭದಲ್ಲಿ ಇಂದು ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದ ಭಾರತ ತಂಡ ಇದೀಗ ಟೆನ್ನಿಸ್ ಡಬಲ್ ನಲ್ಲಿ ಬೆಳ್ಳಿ ಪದಕ ಗೆದ್ದಿದೆ.
ಟೆನ್ನಿಸ್ ಡಬಲ್ ಸ್ಪರ್ಧೆಯಲ್ಲಿ ರಾಮ್ ಕುಮಾರ್ ಮತ್ತು ಸಾಕೇತ್ ಮೈನೇನಿ ಅವರು ಅದ್ಧುತ ಪ್ರದರ್ಶನ ನೀಡುವ ಮೂಲಕ ಬೆಳ್ಳಿ ಪದಕ ಪಡೆದಿದ್ದಾರೆ. ಈ ಮೂಲಕ ಭಾರತದ ಇದು 10ನೇ ಬೆಳ್ಳಿ ಪದಕವಾಗಿದೆ. ವಿಶೇಷವೆಂದರೆ, ಏಷ್ಯನ್ ಗೇಮ್ಸ್ ನಲ್ಲಿ ರಾಮ್ ಕುಮಾರ್ ಗೆ 1 ನೇ ಪದಕ ಮತ್ತು ಸಾಕೇತ್ ಗೆ 3 ನೇ ಪದಕವಾಗಿದೆ.