ಹ್ಯೌಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆಸಿದ್ದು, ಮಹಿಳಾ ಕಬಡ್ಡಿಯಲ್ಲಿ ಭಾರತದ ವನಿತೆಯರು ಭರ್ಜರಿ ಪ್ರದರ್ಶನ ನೀಡುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತದ ಪದಕಗಳ ಸಂಖ್ಯೆ 100 ಕ್ಕೆ ಮುಟ್ಟಿದೆ.
ಭಾರತದ ಮಹಿಳಾ ಕಬಡ್ಡಿ ತಂಡವು ಚೈನೀಸ್ ತೈಪೆ ತಂಡವನ್ನು ಸೋಲಿಸಿ ಚಿನ್ನದ ಪದಕವನ್ನು ಗಳಿಸಿದೆ. ಮಹಿಳಾ ತಂಡದ ಸಾಟಿಯಿಲ್ಲದ ಕೌಶಲ್ಯ, ದೃಢತೆ ಮತ್ತು ತಂಡದ ಕೆಲಸವು ರಾಷ್ಟ್ರಕ್ಕೆಕೀರ್ತಿ ತಂದಿದೆ. ಮತ್ತು ಭಾರತವು AsianGames2022 ಇಲ್ಲಿಯವರೆಗೆ ಒಟ್ಟು 100 ಪದಕಗಳನ್ನು ದಾಖಲಿಸಿದೆ.
ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023 ರಲ್ಲಿ ಭಾರತಕ್ಕೆ ಕನಿಷ್ಠ 100 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದೆ. ಅಧಿಕೃತವಾಗಿ ಭಾರತವು ಇಲ್ಲಿಯವರೆಗೆ 100 ಪದಕಗಳನ್ನು ಗೆದ್ದಿದೆ.
2023 ರ ಆವೃತ್ತಿಯು ಏಷ್ಯನ್ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತದ ಅತ್ಯುತ್ತಮ ಆವೃತ್ತಿ ಮಾತ್ರವಲ್ಲ, ಭಾರತವು ಪದಕ ಪಟ್ಟಿಯಲ್ಲಿ ಮೂರು ಅಂಕಿಯ ಗಡಿಯನ್ನು ಮುಟ್ಟುತ್ತಿರುವುದು ಇದೇ ಮೊದಲು.
ಈ ಹಿಂದೆ 2018ರಲ್ಲಿ ಭಾರತ 70 ಪದಕಗಳನ್ನು ಜಯಿಸಿತ್ತು. ಒಟ್ಟು 100 ಪದಕಗಳನ್ನು ಗೆದ್ದಿರುವ ಭಾರತ ಹೊಸ ಇತಿಹಾಸ ನಿರ್ಮಿಸಿದೆ.
ಇದು ಸಾಧನೆಯಲ್ಲಿ ಭಾಗಿಯಾಗಿರುವ ನಮ್ಮ ಕ್ರೀಡಾಪಟುಗಳ ಕನಸುಗಳು, ಸಮರ್ಪಣೆ ಮತ್ತು ತಂಡದ ಕೆಲಸದ ಶಕ್ತಿಗೆ ಸಾಕ್ಷಿಯಾಗಿದೆ. ಈ ಸಾಧನೆಯು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡಲಿ – ಕಠಿಣ ಪರಿಶ್ರಮ ಮತ್ತು ಉತ್ಸಾಹದಿಂದ ಏನು ಬೇಕಾದರೂ ಸಾಧ್ಯ ಎಂದು ತೋರಿಸಿದೆ.