alex Certify BREAKING : ಏಷ್ಯನ್ ಗೇಮ್ಸ್ ನ `ಮಹಿಳಾ ಕಾಂಪೌಂಡ್ ಆರ್ಚರಿ’ಯಲ್ಲಿ ಭಾರತಕ್ಕೆ ಚಿನ್ನದ ಪದಕ| Asian Games | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಏಷ್ಯನ್ ಗೇಮ್ಸ್ ನ `ಮಹಿಳಾ ಕಾಂಪೌಂಡ್ ಆರ್ಚರಿ’ಯಲ್ಲಿ ಭಾರತಕ್ಕೆ ಚಿನ್ನದ ಪದಕ| Asian Games

ಹಾಂಗ್ಝೌ : 2023ರ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಮಹಿಳಾ ಬಿಲ್ಲುಗಾರಿಕೆ ತಂಡ 19ನೇ ಚಿನ್ನದ ಪದಕ ಗೆದ್ದಿದೆ. ಜ್ಯೋತಿ ಸುರೇಖಾ ವೆನ್ನಮ್, ಅದಿತಿ ಸ್ವಾಮಿ ಮತ್ತು ಪ್ರಣೀತ್ ಕೌರ್ ಅವರನ್ನೊಳಗೊಂಡ ಮಹಿಳಾ ಕಾಂಪೌಂಡ್ ತಂಡ ಫೈನಲ್ನಲ್ಲಿ ತೈವಾನ್ ತಂಡವನ್ನು 230-228ರಿಂದ ಸೋಲಿಸಿತು.

ಒಟ್ಟಾರೆಯಾಗಿ, ಇದು ಕ್ರೀಡಾಕೂಟದಲ್ಲಿ ಭಾರತದ 82 ನೇ ಪದಕವಾಗಿದೆ. ಇದಕ್ಕೂ ಮುನ್ನ ನಡೆದ ಸೆಮಿಫೈನಲ್ನಲ್ಲಿ ಭಾರತ 233-219 ಅಂಕಗಳಿಂದ ಇಂಡೋನೇಷ್ಯಾವನ್ನು ಸೋಲಿಸಿದರೆ, ಕ್ವಾರ್ಟರ್ ಫೈನಲ್ನಲ್ಲಿ ಹಾಂಕಾಂಗ್ 231-220 ಅಂಕಗಳಿಂದ ಮಣಿಸಿತ್ತು. ಕ್ರೀಡಾಕೂಟದಲ್ಲಿ ಭಾರತ ಇದುವರೆಗೆ 19 ಚಿನ್ನ, 31 ಬೆಳ್ಳಿ ಮತ್ತು 32 ಕಂಚಿನ ಪದಕಗಳನ್ನು ಗೆದ್ದಿದೆ.

ಮೊದಲ ಸುತ್ತಿನಲ್ಲಿ ಭಾರತದ ಆಟಗಾರ್ತಿ 56-54ರಿಂದ ಹಿನ್ನಡೆ ಅನುಭವಿಸಿದ್ದರು. ಎರಡನೇ ಸುತ್ತಿನ ನಂತರ ಜ್ಯೋತಿ ಸುರೇಖಾ ವೆನ್ನಮ್, ಅದಿತಿ ಸ್ವಾಮಿ ಮತ್ತು ಪ್ರಣೀತ್ ಕೌರ್ ಬಲವಾದ ಪುನರಾಗಮನ ಮಾಡಿದರು. ಮೂರನೇ ಸುತ್ತಿನಲ್ಲಿ, ತೈವಾನ್ ಆಟಗಾರರು ಉತ್ತಮ ಪ್ರದರ್ಶನ ನೀಡಿದರು ಮತ್ತು ಸ್ಕೋರ್ 171-171 ಕ್ಕೆ ಸಮನಾಗಿತ್ತು. ನಾಲ್ಕನೇ ಸುತ್ತಿನಲ್ಲಿ ಭಾರತದ ಮೂವರು ಉತ್ತಮ ಸ್ಕೋರ್ ಗಳಿಸುವ ಮೂಲಕ ಚಿನ್ನ ಗೆದ್ದರು. ಕೊನೆಯ 3 ಶಾಟ್ ಗಳಲ್ಲಿ ಭಾರತದ ಆಟಗಾರರು ಒಟ್ಟು 30 ಅಂಕ ಗಳಿಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...