ಹಾಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಆರ್ಚರಿ ಮಹಿಳಾ ರಿಕರ್ವ್ ಸ್ಪರ್ಧೆಯಲ್ಲಿ ಭಾರತದ ವನಿತೆಯರು ಕಂಚಿನ ಪದಕ ಪಡೆದಿದ್ದಾರೆ.
ಟಾಪ್ ಸ್ಕೀಮ್ ಬಿಲ್ಲುಗಾರ್ತಿಗಳಾದ ಅಂಕಿತಾ ಭಕತ್ ಮತ್ತು ಖೇಲೋ ಇಂಡಿಯಾ ಅಥ್ಲೀಟ್ ಗಳಾದ ಸಿಮ್ರನ್ ಜೀತ್ ಮತ್ತು ಭಜನ್ ಕೌರ್ ವಿಯೆಟ್ನಾಂ ಅನ್ನು ಸೋಲಿಸಿ ಕಂಚಿನ ಪದಕ ಗೆದ್ದರು. ಈ ಮೂಲಕ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಖಾತೆಗೆ ಮತ್ತೊಂದು ಪದಕ ಸೇರಿಸಿದ್ದಾರೆ.