‘ಮುಡಾ’ದಲ್ಲಿ 14 ಅಲ್ಲ 4500 ನಿವೇಶನಗಳ ಅಕ್ರಮ ನಡೆದಿದೆ ಎಂದು ಬಿಜೆಪಿ ಶಾಸಕ ಶ್ರೀವತ್ಸ ಹೊಸ ಬಾಂಬ್ ಸಿಡಿಸಿದ್ದಾರೆ.
ಮುಡಾದಲ್ಲಿ ಕೇವಲ 14 ಸೈಟ್ ಅಷ್ಟೇ ಅಲ್ಲ, 4500 ನಿವೇಶನಗಳ ಅಕ್ರಮ ನಡೆದಿದೆ. ಎಲ್ಲದರ ಬಗ್ಗೆ ತನಿಖೆಯಾಗಲಿ ಎಂದು ಅವರು ಆಗ್ರಹಿಸಿದ್ದಾರೆ.
ತನಿಖೆ ನಡೆಸುವಾಗ ಆ ಪಕ್ಷ ಈ ಪಕ್ಷ ಎನ್ನಬಾರದು. ತಪ್ಪು ಮಾಡಿದರೆ ನಮ್ಮ ಪಕ್ಷದವರನ್ನು ತನಿಖೆ ಮಾಡಲಿ. ಮುಡಾದಲ್ಲಿ 4500 ನಿವೇಶನಗಳ ಅಕ್ರಮ ನಡೆದಿದೆ ಎಂದರು. ದಸರಾ ಉದ್ಘಾಟನಾ ಭಾಷಣದಲ್ಲಿ ಹಂಪ ನಾಗರಾಜ್ ರಾಜಕೀಯ ಭಾಷಣ ಮಾಡಬಾರದಿತ್ತು ಎಂದು ಅವರು ಹೇಳಿದರು.