ಬೆಂಗಳೂರು : ಚುನಾವಣೆ ಪ್ರಚಾರಕ್ಕೆ ಕರೆದರೆ ಖಂಡಿತ ಹೋಗುತ್ತೇನೆ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.
ಇಂದು ಸುದ್ದಿಗಾರರ ಜೊತೆ ಮಾತನಾಡಿದ ನಟ ಕಿಚ್ಚ ಸುದೀಪ್ ಸದ್ಯ ಯಾರೂ ನನ್ನನ್ನು ಪ್ರಚಾರಕ್ಕೆ ಕರೆದಿಲ್ಲ, ಚುನಾವಣೆ ಪ್ರಚಾರಕ್ಕೆ ಕರೆದರೆ ಖಂಡಿತ ಹೋಗುತ್ತೇನೆ ಎಂದು ಹೇಳಿದ್ದಾರೆ.
ಇನ್ನೂ ಸಿನಿಮಾ ಶೂಟಿಂಗ್ ಬಾಕಿಯಿದೆ. ಸಿನಿಮಾ ಶೂಟಿಂಗ್ ಮುಗಿದ ಬಳಿಕ ನೋಡೋಣ, ಪ್ರಚಾರಕ್ಕೆ ಕರೆದರೆ ಖಂಡಿತ ಹೋಗುತ್ತೇನೆ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರ ನಟ ಕಿಚ್ಚ ಸುದೀಪ್ ಪ್ರಚಾರ ಮಾಡಿದ್ದರು.