ಮಹಿಳಾ ಟಿ 20 ವಿಶ್ವಕಪ್ 2024 ರ ಪರಿಷ್ಕೃತ ವೇಳಾಪಟ್ಟಿಯನ್ನು ಐಸಿಸಿ ಪ್ರಕಟಿಸಿದ್ದು, ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್ ನಡುವಿನ ಆರಂಭಿಕ ಪಂದ್ಯದೊಂದಿಗೆ ಪಂದ್ಯಾವಳಿ ಪ್ರಾರಂಭವಾದ ಮೂರು ದಿನಗಳ ನಂತರ ಅಕ್ಟೋಬರ್ 6 ರಂದು ಭಾರತ ಪಾಕಿಸ್ತಾನವನ್ನು ಎದುರಿಸಲಿದೆ.
ಭಾರತ ತಂಡ ಅಕ್ಟೋಬರ್ 4ರಂದು ನ್ಯೂಜಿಲೆಂಡ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ.
ಯುಎಇಯ ಎರಡು ಸ್ಥಳಗಳಾದ ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ಮತ್ತು ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ 10 ತಂಡಗಳು 23 ಪಂದ್ಯಗಳನ್ನು ಆಡಲಿವೆ.
‘ಎ’ ಗುಂಪಿನಲ್ಲಿ ಆರು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ, ಭಾರತ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳಿದ್ದರೆ, ‘ಬಿ’ ಗುಂಪಿನಲ್ಲಿ ಬಾಂಗ್ಲಾದೇಶ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಸ್ಕಾಟ್ಲೆಂಡ್ ತಂಡಗಳಿವೆ. ಪ್ರತಿ ತಂಡವು ಎರಡು ಸ್ಥಳಗಳಲ್ಲಿ ನಿಗದಿಯಾಗಿರುವ ನಾಲ್ಕು ಗುಂಪು ಪಂದ್ಯಗಳಲ್ಲಿ ಸ್ಪರ್ಧಿಸಲಿದೆ.
ಮಹಿಳಾ ಟಿ20 ವಿಶ್ವಕಪ್ 2024 ವೇಳಾಪಟ್ಟಿ ಪ್ರಕಟ
ಅಕ್ಟೋಬರ್ 3, ಗುರುವಾರ, ಬಾಂಗ್ಲಾದೇಶ ವಿರುದ್ಧ ಸ್ಕಾಟ್ಲೆಂಡ್, ಶಾರ್ಜಾ
ಅಕ್ಟೋಬರ್ 3, ಗುರುವಾರ, ಪಾಕಿಸ್ತಾನ ವಿರುದ್ಧ ಶ್ರೀಲಂಕಾ, ಶಾರ್ಜಾ
ಅಕ್ಟೋಬರ್ 4, ಶುಕ್ರವಾರ, ದಕ್ಷಿಣ ಆಫ್ರಿಕಾ ವಿರುದ್ಧ ವೆಸ್ಟ್ ಇಂಡೀಸ್, ದುಬೈ
ಅಕ್ಟೋಬರ್ 4, ಶುಕ್ರವಾರ, ಭಾರತ ವಿರುದ್ಧ ನ್ಯೂಜಿಲೆಂಡ್, ದುಬೈ
ಅಕ್ಟೋಬರ್ 5, ಶನಿವಾರ, ಬಾಂಗ್ಲಾದೇಶ ವಿರುದ್ಧ ಇಂಗ್ಲೆಂಡ್, ಶಾರ್ಜಾ
ಅಕ್ಟೋಬರ್ 5, ಶನಿವಾರ, ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ, ಶಾರ್ಜಾ
ಅಕ್ಟೋಬರ್ 6, ಭಾನುವಾರ, ಭಾರತ ವಿರುದ್ಧ ಪಾಕಿಸ್ತಾನ, ದುಬೈ
ಅಕ್ಟೋಬರ್ 6, ಭಾನುವಾರ, ವೆಸ್ಟ್ ಇಂಡೀಸ್ ವಿರುದ್ಧ ಸ್ಕಾಟ್ಲೆಂಡ್, ದುಬೈ
ಅಕ್ಟೋಬರ್ 7, ಸೋಮವಾರ, ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ, ಶಾರ್ಜಾ
ಅಕ್ಟೋಬರ್ 8, ಮಂಗಳವಾರ, ಆಸ್ಟ್ರೇಲಿಯಾ ವಿರುದ್ಧ ನ್ಯೂಜಿಲೆಂಡ್, ಶಾರ್ಜಾ
ಅಕ್ಟೋಬರ್ 9, ಬುಧವಾರ, ದಕ್ಷಿಣ ಆಫ್ರಿಕಾ ವಿರುದ್ಧ ಸ್ಕಾಟ್ಲೆಂಡ್, ದುಬೈ
ಅಕ್ಟೋಬರ್ 9, ಬುಧವಾರ, ಭಾರತ ವಿರುದ್ಧ ಶ್ರೀಲಂಕಾ, ದುಬೈ
ಅಕ್ಟೋಬರ್ 10, ಗುರುವಾರ, ಬಾಂಗ್ಲಾದೇಶ ವಿರುದ್ಧ ವೆಸ್ಟ್ ಇಂಡೀಸ್, ಶಾರ್ಜಾ
ಅಕ್ಟೋಬರ್ 11, ಶುಕ್ರವಾರ, ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ, ದುಬೈ
ಅಕ್ಟೋಬರ್ 12, ಶನಿವಾರ, ನ್ಯೂಜಿಲೆಂಡ್ ವಿರುದ್ಧ ಶ್ರೀಲಂಕಾ, ಶಾರ್ಜಾ
ಅಕ್ಟೋಬರ್ 12, ಶನಿವಾರ, ಬಾಂಗ್ಲಾದೇಶ ವಿರುದ್ಧ ದಕ್ಷಿಣ ಆಫ್ರಿಕಾ, ದುಬೈ
ಅಕ್ಟೋಬರ್ 13, ಭಾನುವಾರ, ಇಂಗ್ಲೆಂಡ್ ವಿರುದ್ಧ ಸ್ಕಾಟ್ಲೆಂಡ್, ಶಾರ್ಜಾ
ಅಕ್ಟೋಬರ್ 13, ಭಾನುವಾರ, ಭಾರತ ವಿರುದ್ಧ ಆಸ್ಟ್ರೇಲಿಯಾ, ಶಾರ್ಜಾ
ಅಕ್ಟೋಬರ್ 14, ಸೋಮವಾರ, ಪಾಕಿಸ್ತಾನ ವಿರುದ್ಧ ನ್ಯೂಜಿಲೆಂಡ್, ದುಬೈ
ಅಕ್ಟೋಬರ್ 15, ಮಂಗಳವಾರ, ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್, ದುಬೈ
17 ಅಕ್ಟೋಬರ್, ಗುರುವಾರ, ಸೆಮಿಫೈನಲ್ 1, ದುಬೈ
ಅಕ್ಟೋಬರ್ 18, ಶುಕ್ರವಾರ, ಸೆಮಿಫೈನಲ್ 2, ಶಾರ್ಜಾ
20 ಅಕ್ಟೋಬರ್, ಭಾನುವಾರ, ಫೈನಲ್, ದುಬೈ.