ಬೆಂಗಳೂರು : ಮೇ.31 ರಂದು ಎಸ್ ಐ ಟಿ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.
ವಿದೇಶದಲ್ಲಿ ವಿಡಿಯೋ ಮೂಲಕ ಹೇಳಿಕೆ ನೀಡಿದ ಪ್ರಜ್ವಲ್ ರೇವಣ್ಣ ‘ ನಾನು ನನ್ನ ತಂದೆ-ತಾಯಿ, ತಾತನ ಕ್ಷಮೆ ಕೇಳುತ್ತೇನೆ. ವಿದೇಶದಕ್ಕೆ ಹೋದ 3 -4 ದಿನದ ಬಳಿಕ ಪ್ರಕರಣದ ಬಗ್ಗೆ ತಿಳಿಯಿತು. ಮೇ 31 ರಂದು ಬೆಳಗ್ಗೆ 10 ಗಂಟೆಗೆ ಎಸ್ ಐ ಟಿ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.
ವಾರ್ನ್ ಮಾಡಿದ್ದ ತಾತ
ನನ್ನ ತಾಳ್ಮೆ ಪರೀಕ್ಷೆ ಮಾಡಬೇಡ, ಎಲ್ಲೇ ಇದ್ರೂ ಶರಣಾಗು ಎಂದು ಪ್ರಜ್ವಲ್ ರೇವಣ್ಣಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಖಡಕ್ ವಾರ್ನಿಂಗ್ ನೀಡಿದ್ದರು. ಈ ಬಗ್ಗೆ ಟ್ವೀಟ್ ನಲ್ಲಿ ಬಹಿರಂಗ ಪತ್ರ ಹೊರಡಿಸಿರುವ ದೇವೇಗೌಡರು ನನ್ನ ತಾಳ್ಮೆ ಪರೀಕ್ಷೆ ಮಾಡಬೇಡ, ಎಲ್ಲೇ ಇದ್ರೂ ಪೊಲೀಸರಿಗೆ ಶರಣಾಗು. ಕಾನೂನು ಪ್ರಕ್ರಿಯೆಗೆ ಹಾಜರಾಗು..ಎಲ್ಲಿದ್ದರೂ ಸ್ವದೇಶಕ್ಕೆ ವಾಪಸ್ ಆಗಬೇಕು…ಈ ವಿಚಾರವನ್ನು ಯಾವುದೇ ಮುಲಾಜಿಲ್ಲದೇ ಹೇಳುತ್ತಿದ್ದೇನೆ.ಎಲ್ಲವನ್ನು ತೀರ್ಮಾನಿಸಲು ಕಾನೂನು ಇದೆ. ನಾನಾಗಲಿ ನನ್ನ ಕುಟುಂಬವಾಗಲಿ ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಭರವಸೆ ನೀಡುತ್ತೇನೆ. ಬಾರದೇ ಇದ್ರೆ ಕುಟುಂಬದ ಕೋಪದ ಕಣ್ಣಿಗೆ ಗುರಿಯಾಗುತ್ತೀಯಾ..? ಕುಟುಂಬದ ಕಣ್ಣಿಗೆ ನೀನು ಏಕಾಂಗಿಯಾಗಿರಬೇಕಾದಿತು ಎಂದು ದೇವೇಗೌಡರು ಖಡಕ್ ಎಚ್ಚರಿಕೆ ನೀಡಿದ್ದರು.
ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಲು ಎಸ್ಐಟಿ ಸಹಾಯವಾಣಿ ತೆರೆದಿದ್ದು, ಈವರೆಗೆ 30ಕ್ಕೂ ಹೆಚ್ಚು ಕರೆ ಗಳು ಬಂದಿವೆ ಎಂದು ಎಸ್ಐಟಿ ಮಾಹಿತಿ ನೀಡಿತ್ತು. ದೌರ್ಜನ್ಯ ಪ್ರಕರಣ ಸಂಬಂಧ 30ಕ್ಕೂ ಹೆಚ್ಚು ಕರೆಗಳು ಬಂದಿವೆ. ಆದರೆ ಇದುವರೆಗೂ ಸಂತ್ರಸ್ತೆಯರು ದೂರು ನೀಡಿಲ್ಲ ಎಂದು ಎಸ್ಐಟಿ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಹೆಲ್ಪ್ ಲೈನ್ ಸಂಪರ್ಕಿಸಿ ಮಾಹಿತಿ ನೀಡುವಂತೆ ಎಸ್ಐಟಿ ಮನವಿ ಮಾಡಿತ್ತು.