ಬೆಂಗಳೂರು : ನನಗೆ ಗನ್ ಬೇಕು, ಲೈಸೆನ್ಸ್ ರದ್ದು ಮಾಡಬೇಡಿ ಎಂದು ಪೊಲೀಸರಿಗೆ ನಟ ದರ್ಶನ್ ಮನವಿ ಮಾಡಿದ್ದಾರೆ.
ಪೊಲೀಸರ ನೋಟಿಸ್ ಗೆ ಉತ್ತರ ನೀಡಿದ ನಟ ದರ್ಶನ್ ನಾನು ಸೆಲೆಬ್ರಿಟಿ, ಹೊರಗಡೆ ಹೋದಾಗ ಸುರಕ್ಷತೆಗೆ ಗನ್ ಬೇಕಾಗುತ್ತದೆ. ನನಗೆ ಗನ್ ಬೇಕು, ಲೈಸೆನ್ಸ್ ರದ್ದು ಮಾಡಬೇಡಿ ಎಂದು ಪೊಲೀಸರಿಗೆ ನಟ ದರ್ಶನ್ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಈಗಾಗಲೇ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಜಾಮೀನು ರದ್ದುಮಾಡುವಂತೆ ಪೊಲೀಸರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಈ ಬೆನ್ನಲ್ಲೇ ದರ್ಶನ್ ಬಳಿಯಿದ್ದ ಗನ್ ಲೈಸೆನ್ಸ್ ರದ್ದು ಮಾಡಲು ಪೊಲೀಸರು ನಿರ್ಧರಿಸಿ ನಟ ದರ್ಶನ್ ಗೆ ನೋಟಿಸ್ ನೀಡಿದ್ದರು. ಇದಕ್ಕೆ ನಟ ದರ್ಶನ್ ಉತ್ತರ ನೀಡಿದ್ದಾರೆ.
ನೀವು ಕೊಲೆ ಪ್ರಕರಣದ ಆರೋಪಿಯಾಗಿದ್ದೀರಿ, ಜಾಮೀನಿನ ಮೇಲೆ ಹೊರಗಿರುವುದರಿಂದ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಆದ್ದರಿಂದ ನಿಮ್ಸ್ ಲೈಸೆನ್ಸ್ ರದ್ದುಪಡಿಸಬೇಕಾಗಿದೆ ಎಂದು ಪೊಲೀಸರು ನೋಟಿಸ್ ನೀಡಿದ್ದರು.