ಕೊಪ್ಪಳ : ಕೊಪ್ಪಳದಲ್ಲಿ ತುಂಗಭದ್ರ ನದಿಗೆ ಹಾರಿದ್ದ ಹೈದರಾಬಾದ್ ಮೂಲದ ವೈದ್ಯೆ ಶವವಾಗಿ ಪತ್ತೆಯಾಗಿದ್ದಾರೆ.
ತುಂಗಾಭದ್ರಾ ನದಿಯಲ್ಲಿ ಈಜಲು ಹೋಗಿ ವೈದ್ಯೆ ಸಾವನ್ನಪ್ಪಿದ ಘಟನೆ ತಾಲೂಕಿನ ಸಣಾಪುರದ ಬಳಿ ನಡೆದಿತ್ತು. ವೈದ್ಯೆಯನ್ನು ಹೈದರಾಬಾದ್ ಮೂಲದ ನಾಂಪಲ್ಲಿ ಪ್ರದೇಶದ ನಿವಾಸಿ ಅನನ್ಯಾ ರಾವ್ ಎಂದು ಗುರುತಿಸಲಾಗಿದೆ.
ಹೈದರಾಬಾದ್ ನ ವಿಕೆಸಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಸ್ನೇಹಿತರ ಜೊತೆ ಕೊಪ್ಪಳಕ್ಕೆ ಪ್ರವಾಸ ಬಂದಿದ್ದರು. ಅನನ್ಯಾ ರಾವ್ ನಿನ್ನೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿತ್ತು, ಇದೀಗ ವೈದ್ಯೆಯ ಶವ ಪತ್ತೆಯಾಗಿದೆ. ಸ್ನೇಹಿತರ ಜೊತೆ ಪ್ರವಾಸಕ್ಕೆಂದು ಹೋದ ಮಹಿಳೆ ಸ್ನೇಹಿತರ ಎದುರೇ ನೀರಿಗೆ ಜಿಗಿದಿದ್ದರು. ನೀರಿಗೆ ಜಿಗಿಯುವ ದೃಶ್ಯಗಳನ್ನು ಸ್ನೇಹಿತರು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದರು.