alex Certify BREAKING : ‘ಹಾಸ್ಟೆಲ್ ಹುಡುಗರು’ ಸಿನಿಮಾ ವಿವಾದ : ಕೋರ್ಟ್’ಗೆ ಹಾಜರಾದ ನಟಿ ರಮ್ಯಾ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ‘ಹಾಸ್ಟೆಲ್ ಹುಡುಗರು’ ಸಿನಿಮಾ ವಿವಾದ : ಕೋರ್ಟ್’ಗೆ ಹಾಜರಾದ ನಟಿ ರಮ್ಯಾ.!

ಬೆಂಗಳೂರು : ಹಾಸ್ಟೆಲ್ ಹುಡುಗರು ಸಿನಿಮಾ ವಿವಾದಕ್ಕೆ ಸಂಬಂಧಿಸಿದಂತೆ ಕೋರ್ಟ್ ಗೆ ನಟಿ ರಮ್ಯಾ ಹಾಜರಾಗಿದ್ದಾರೆ.

ವಕೀಲರ ಸಮೇತ ಕೋರ್ಟ್ ಗೆ ನಟಿ ರಮ್ಯಾ ಆಗಮಿಸಿದ್ದು, ಹಾಸ್ಟೆಲ್ ಹುಡುಗರು ಸಿನಿಮಾದಲ್ಲಿ ಪ್ರಚಾರಕ್ಕೆ ನನ್ನ ಫೋಟೋ ಬಳಕೆ ಮಾಡಿದ್ದಾರೆಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದಾರೆ.

ಸಿನಿಮಾ ವಿವಾದದ ವಿಚಾರಕ್ಕೆ ಕೋರ್ಟ್ ಗೆ ಬಂದೆ, ಟ್ರಯಲ್ ನಡೀತಾ ಇದೆ. ಮಾರ್ಚ್ 19 ಕ್ಕೆ ಮತ್ತೆ ಟ್ರಯಲ್ ಇದೆ. ಈಗ ಕೋರ್ಟ್ ಗೆ ದಾಖಲೆ ಕೊಡಲು ಬಂದಿದ್ದೇನೆ ಎಂದು ಹೇಳಿದರು.

ಚಿತ್ರದಲ್ಲಿ ನನ್ನ ದೃಶ್ಯವನ್ನು ಅನುಮತಿ ಇಲ್ಲದೇ ಬಳಸಲಾಗಿದೆ ಎಂದು ಹಾಸ್ಟೆಲ್ ಹುಡುಗರಿಗೆ ನಟಿ ರಮ್ಯಾ ನೋಟಿಸ್ ನೀಡಿದ್ದರು. ಅಲ್ಲದೇ ಚಿತ್ರಪ್ರದರ್ಶನಕ್ಕೆ ತಡೆ ನೀಡಬೇಕು ಎಂದು ನಟಿ ರಮ್ಯಾ ಕಮರ್ಷಿಯಲ್ ಕೋರ್ಟ್ ಮೆಟ್ಟಿಲೇರಿದ್ದರು. ನಂತರ ಈ ಕೇಸ್ ಗೆ ಸಂಬಂಧಿಸಿದಂತೆ ರಮ್ಯಾ ಕೋರ್ಟ್ ಗೆ ಕೆಲವು ದಾಖಲೆಗಳನ್ನು ಜನವರಿಯಲ್ಲಿ ಸಲ್ಲಿಸಿದ್ದರು. ಇಂದು ಮತ್ತೆ ವಕೀಲರ ಸಮೇತ ಕೋರ್ಟ್ ಗೆ ನಟಿ ರಮ್ಯಾ ಆಗಮಿಸಿದ್ದಾರೆ.

ಹಾಸ್ಟೆಲ್ ಹುಡುಗರು’ ಸಿನಿಮಾದಲ್ಲಿ ದೃಶ್ಯಗಳನ್ನು ತಮ್ಮ ಅನುಮತಿ ಇಲ್ಲದೇ ಬಳಸಲಾಗಿದೆ, ಎಲ್ಲ ಕಡೆಗಳಿಂದ ತಮ್ಮ ದೃಶ್ಯ, ಫೋಟೋ, ಮತ್ತಿತ್ತರ ಕಂಟೆಂಟ್ಗಳನ್ನು ತೆಗೆದುಹಾಕಬೇಕು ಎಂದು ನಟಿ ಡಿಮ್ಯಾಂಡ್ ಮಾಡಿದ್ದರು. ಅಲ್ಲದೇ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಕೂಡ ಅವರು ನೋಟೀಸ್ ನಲ್ಲಿ ಒತ್ತಾಯಿಸಿದ್ದರು. ನನ್ನ ಪರ್ಮಿಷನ್ ಇಲ್ಲದೇ ನನ್ನ ಯಾವ ದೃಶ್ಯಗಳನ್ನು ಬಳಸಬಾರದು, ಇದರಿಂದ ತಮಗೆ ಆಗಿರುವ ನಷ್ಟವನ್ನು ತುಂಬಿಕೊಡಬೇಕು ಎಂದು ಕಮರ್ಷಿಯಲ್ ಕೋರ್ಟ್ ಮೂಲಕ ನಟಿ ರಮ್ಯಾ ನೋಟಿಸ್ ನೀಡಿದ್ದರು. ನಂತರ ಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿ ಹಾಸ್ಟೆಲ್ ಹುಡುಗರು ಚಿತ್ರತಂಡಕ್ಕೆ ರಿಲೀಫ್ ನೀಡಿತ್ತು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...