ಹಾವೇರಿ : ಬೈಕ್ ಸವಾರನ ನಿರ್ಲಕ್ಷ್ಯಕ್ಕೆ ಆತನ ತಾಯಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿಯಲ್ಲಿ ನಡೆದಿದೆ.
ರಾಣೆಬೆನ್ನೂರು ತಾಲೂಕಿನ ಚಳಗೇರಿ ಟೋಲ್ ಬಳಿ ಈ ಘಟನೆ ನಡೆದಿದೆ. ಗಿರಿಜಮ್ಮ ಎಂಬ ಮಹಿಳೆ ಮೃತಪಟ್ಟಿದ್ದು, ಟೋಲ್ ಗೇಟ್ ಹಾಕಿದರೂ ಸೈಡಿಗೆ ಹೋಗದೇ ಬೈಕ್ ಸವಾರ ನಿರ್ಲಕ್ಷ್ಯ ವಹಿಸಿದ್ದು , ಮಗನ ತಪ್ಪಿಗೆ ತಾಯಿ ಪ್ರಾಣ ಕಳೆದುಕೊಂಡಿದ್ದಾರೆ.
ಟೋಲ್ ಗೇಟ್’ನ ತಡೆಗಂಬ ಗಿರಿಜಮ್ಮ ತಲೆಗೆ ಬಡಿದಿದ್ದು, ಗಂಭೀರವಾಗಿ ಗಾಯಗೊಂಡ ಗಿರಿಜಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ರಾಣೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.