ಬಂಟ್ವಾಳ : ಬಂಟ್ವಾಳದಲ್ಲಿ ಘೋರ ಘಟನೆ ನಡೆದಿದ್ದು, ಕಸಕ್ಕೆ ಹಾಕಿದ್ದ ಬೆಂಕಿ ತಗುಲಿ ವೃದ್ದ ದಂಪತಿ ಸಜೀವವಾಗಿ ದಹನವಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಅಮ್ಟಾಡಿ ಬಳಿಯ ಈ ಘಟನೆ ನಡೆದಿದೆ. ಕಸಕ್ಕೆ ಹಾಕಿದ್ದ ಬೆಂಕಿ ಕಾಡಿಗೆ ತಗಲುತ್ತದೆ ಎಂದು ಅದನ್ನು ಆರಿಸಲು ಹೋದ ವೃದ್ದ ದಂಪತಿ ಬೆಂಕಿಗೆ ಸಿಲುಕಿ ಸಜೀವವಾಗಿ ದಹನವಾಗಿದ್ದಾರೆ.
ಮೃತರನ್ನು ಗಿಲ್ಬರ್ಟ್ ಕಾರ್ಲೋ(78) ಪತ್ನಿ ಕ್ರಿಸ್ಟಿನಾ ಕಾರ್ಲೋ(70) ಎಂದು ಗುರುತಿಸಲಾಗಿದೆ.
ಮನೆ ಪಕ್ಕದ ಕಸಕ್ಕೆ ದಂಪತಿಗಳು ಬೆಂಕಿ ಹಾಕಿದ್ದರು, ನಂತರ ಮನೆ ಪಕ್ಕದ ಕಾಡಿಗೂ ಬೆಂಕಿ ತಗುಲಿದೆ. ಬೆಂಕಿಯಿಂದ ಇಡೀ ಕಾಡು ಹೊತ್ತಿ ಉರಿಯುತ್ತದೆ ಎಂದು ಆತಂಕಗೊಂಡ ದಂಪತಿಗಳು ಬೆಂಕಿ ನಂದಿಸಲು ಹೋಗಿದ್ದಾರೆ, ಪರಿಣಾಮ ಇಬ್ಬರು ಬೆಂಕಿಗೆ ಸಿಲುಕಿ ಸುಟ್ಟು ಕರಕಲಾಗಿದ್ದಾರೆ. ಘಟನೆ ಸಂಬಂಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.