ಬೆಂಗಳೂರು : ಬಿಬಿಎಂಪಿ ಕಸದ ಲಾರಿ ಡಿಕ್ಕಿಯಾಗಿ ಇಬ್ಬರು ಮಹಿಳೆಯರು ಮೃತಪಟ್ಟಂತಹ ಘಟನೆ ಇಂದು ಮಧ್ಯಾಹ್ನ 12 :30 ರ ಸುಮಾರಿಗೆ ಥಣಿಸಂದ್ರ ಮುಖ್ಯ ರಸ್ತೆಯ ಸಾರಾಯಿ ಪಾಳ್ಯದಲ್ಲಿ ಘಟನೆ ನಡೆದಿದೆ.
ನಾಜಿಯಾ ಸುಲ್ತಾನ ಹಾಗೂ ಆಕೆಯ ಸೋದರಿ ನಾಜಿಯಾ ಇರ್ಫಾನ್ ಮೃತಪಟ್ಟಿದ್ದು ಸಹೋದರಿಯರ ಶವಗಳನ್ನು ಯಲಹಂಕದ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಘಟನೆ ಸಂಬಂಧ ಕಸದ ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಟೇಕ್ ಮಾಡಲು ಹೋಗಿ ಈ ದುರ್ಘಟನೆ ಸಂಭವಿಸಿದೆ.ಮೃತರು ಗೋವಿಂದಪುರದ ನಿವಾಸಿಗಳು ಎಂದು ಗುರುತಿಸಲಾಗಿದೆ.