ಮಂಡ್ಯ : ಮಂಡ್ಯದಲ್ಲಿ ಬೆಳ್ಳಂ ಬೆಳಗ್ಗೆ ಭೀಕರ ಮರ್ಡರ್ ನಡೆದಿದ್ದು, ಕತ್ತು ಸೀಳಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಮಂಡ್ಯದ ಲಕ್ಷ್ಮೇಗೌಡನದೊಡ್ಡಿಯಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ಎಲ್ ಕೃಷ್ಣೇಗೌಡ (47) ಎಂಬುವರನ್ನು ಹತ್ಯೆಗೈದು ಆರೋಪಿಗಳು ಎಸ್ಕೇಪ್ ಆಗಿದ್ದಾರೆ.
ಕೃಷ್ಣೇಗೌಡ ಅವರು ತೋಟದ ಬಳಿ ಮುಂಜಾನೆ ಎಮ್ಮೆ ಕರು ಕಟ್ಟುತ್ತಿದ್ದಾಗ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಹೊಟ್ಟೆಗೆ ಇರಿದು ನಂತರ ಕತ್ತು ಸೀಳಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ.ಹಣಕಾಸು ವಿಚಾರಕ್ಕೆ ಸಂಬಂಧಪಟ್ಟಂತೆ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಹಾಗೂ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದೆ.