ಚಿಕ್ಕಬಳ್ಳಾಪುರ : ದೇವಾಲಯಕ್ಕೆ ಕಾರು ಡಿಕ್ಕಿಯಾಗಿ ಪತ್ರಕರ್ತ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗುಂಡಿಬಂಡೆಯ ಮಾಚನಹಳ್ಳಿಯ ನಡೆದಿದೆ.
ಗುಂಡಿಬಂಡೆ ಮೂಲದ ಭರತ್ (32) ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದು, ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಗಳ ನಾಮಕರಣ ಸಿದ್ದತೆಯಲ್ಲಿದ್ದ ಭರತ್ ಅಪಘಾತದಲ್ಲಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.ಗುಡಿಬಂಡೆ ಪಟ್ಟಣದಿಂದ ಬಾಗೇಪಲ್ಲಿಗೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಕಾರು ದೇವಾಲಯಕ್ಕೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.