ಬೆಂಗಳೂರು : HMPV Viruse ಮಾರಣಾಂತಿಕ ಅಲ್ಲ ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ ಸೇರಿದಂತೆ ಲಾಕ್ ಡೌನ್ ನಂತಹ ಕಠಿಣ ನಿಯಮ ಜಾರಿ ಮಾಡಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಹೆಚ್ ಎಂಪಿವಿ ವೈರಸ್ ಭೀತಿ ಹಿನ್ನೆಲೆ ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ‘HMPV Viruse ಮಾರಣಾಂತಿಕ ಅಲ್ಲ..ದೇಶದಲ್ಲಿ ನೂರಾರು ರೀತಿಯ ವೈರಸ್ ಇದೆ. ವೈರಸ್ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ, ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ ಸೇರಿದಂತೆ ಲಾಕ್ ಡೌನ್ ನಂತಹ ಕಠಿಣ ನಿಯಮ ಜಾರಿ ಮಾಡಲ್ಲ ಎಂದರು.
ಜನರು ಎಚ್ಚರಿಕೆಯಿಂದಿರಿ..ಹೆಚ್ಚಿನ ಜನಸಂದಣಿ ಇರುವ ಪ್ರದೇಶಗಳಲ್ಲಿ ಓಡಾಡಬೇಡಿ…ಹೆಚ್ಚೆಚ್ಚು ನೀರು ಕುಡಿಯಿರಿ..ಉತ್ತಮ ಹಾಗೂ ಶುಚಿಯಾದ ಆಹಾರ ಸೇವಿಸಿ ಎಂದರು. ಸೋಂಕು ತಗುಲಿದ ಮಗುವಿನ ಆರೋಗ್ಯ ಸಹಜವಾಗಿದೆ. 1-2 ದಿನದಲ್ಲಿ ಡಿಸ್ಚಾರ್ಜ್ ಆಗಲಿದೆ ಎಂದರು.
HMPV Viruse ಮಾರಣಾಂತಿಕ ಅಲ್ಲ, ರಾಜ್ಯದಲ್ಲಿ ಮಾಸ್ಕ್ ಕಡ್ಡಾಯ ಸೇರಿದಂತೆ ಲಾಕ್ ಡೌನ್ ನಂತಹ ಕಠಿಣ ನಿಯಮ ಜಾರಿ ಮಾಡಲ್ಲ. ಆದರೆ ಜನರು ಮುಂಜಾಗೃತೆ ವಹಿಸಬೇಕು. HMPV Viruse ನಿಂದ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದರು.