ಬೆಂಗಳೂರು : ರಾಜ್ಯದಲ್ಲಿ ‘HMPV’ ಟೆಸ್ಟ್ ಕಡ್ಡಾಯವಲ್ಲ ಎಂದು ಆಸ್ಪತ್ರೆಗೆ ಹೋಗುವವರಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಚಳಿಗಾಲದಲ್ಲಿ ಇಂತಹ ವೈರಸ್ ಕಾಣಿಸಿಕೊಳ್ಳುವುದು ಸಾಮಾನ್ಯ, ರಾಜ್ಯದಲ್ಲಿ ‘HMPV’ ಟೆಸ್ಟ್ ಕಡ್ಡಾಯವಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಈ ಟೆಸ್ಟ್’ಗೆ 10 ರಿಂದ 12 ಸಾವಿರ ತೆಗೆದುಕೊಳ್ಳಲಾಗುತ್ತಿದೆ. ಹಾಗಾಗಿ ಹೆಚ್ ಎಂಪಿ ಟೆಸ್ಟಿಂಗ್ ಕಡ್ಡಾಯ ಎನ್ನುವ ಆಸ್ಪತ್ರೆ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಟೆಸ್ಟಿಂಗ್ ಮಾಡುತ್ತಿಲ್ಲ. ಟೆಸ್ಟಿಂಗ್ ಕಡ್ಡಾಯವೇನಲ್ಲ ಎಂದು ಸಲಹೆ ನೀಡಿದೆ. ‘HMPV’ ವೈರಸ್ ಅಪಾಯಕಾರಿ ಅಲ್ಲ ಎಂದು ರಾಜ್ಯ ಆರೋಗ್ಯ ಇಲಾಖೆ ಇಂದು ಅಧಿಕೃತವಾಗಿ ಪ್ರಕಟಣೆ ಹೊರಡಿಸುವ ಸಾಧ್ಯತೆಯಿದೆ.
ಎಚ್ಎಂಪಿವಿ ವೈರಸ್ ಬಗ್ಗೆ ಆತಂಕ ಬೇಡ, ಇರಲಿ ಈ ಎಚ್ಚರ
• ಸೀನುವಾಗ ಅಥವಾ ಕೆಮ್ಮುವಾಗ ಕರವಸ್ತ್ರವನ್ನು ಉಪಯೋಗಿಸಿ
• ಸ್ಯಾನಿಟೈಸರ್ ಅಥವಾ ಸೋಪ್ನಿಂದ ನಿಮ್ಮ ಕೈಯನ್ನು ಆಗಾಗ ಸ್ವಚ್ಛಗೊಳಿಸುತ್ತಿರಿ
• ಜನಸಂದಣಿ ಹೆಚ್ಚಿರುವ ಸ್ಥಳಗಳಿಗೆ ತೆರಳಬೇಡಿ
• ಜ್ವರ, ಕೆಮ್ಮು ಅಥವಾ ಶೀತದ ಲಕ್ಷಣಗಳಿದ್ದಲ್ಲಿ ಹೊರಗಡೆ ಓಡಾಡದಿರಿ
• ಬಿಸಿ ನೀರು ಕುಡಿಯಿರಿ ಮತ್ತು ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸಿ
• ಅನಾರೋಗ್ಯವಿದ್ದರೆ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಿ, ಮನೆಯಲ್ಲೇ ಸುರಕ್ಷಿತವಾಗಿರಿ