ಬೆಂಗಳೂರು : ಟ್ಯಾಟೂನಿಂದ ಹೆಚ್ಐವಿ, ಕ್ಯಾನ್ಸರ್ ಬರುವ ಆತಂಕ ಮನೆ ಮಾಡಿದ್ದು, ಟ್ಯಾಟೂ ಬ್ಯಾನ್ ಮಾಡಲು ರಾಜ್ಯ ಸರ್ಕಾರ ಸಿದ್ದತೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹೌದು, ದೇಶದಲ್ಲಿ ಮೊದಲ ಬಾರಿಗೆ ಟ್ಯಾಟೂಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಟ್ಯಾಟೂನಿಂದ ಕ್ಯಾನ್ಸರ್, ಚರ್ಮದ ಕಾಯಿಲೆ, ಹೆಚ್ ಐವಿ ಸೇರಿದಂತೆ ಮತ್ತಿತರರ ಸೋಂಕು ಹರಡುತ್ತಿರುವ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಿದ್ದು, ಈ ಬಗ್ಗೆ ವರದಿ ಪಡೆದ ಆರೋಗ್ಯ ಇಲಾಖೆ ಟ್ಯಾಟೂಗೆ ಕಡಿವಾಣ ಹಾಕಲು ಚಿಂತನೆ ನಡೆಸಿದೆ.
ಮಾರಣಾಂತಿಕ ಖಾಯಿಲೆಗೆ ಕಾರಣವಾಗುವ ಕೆಮಿಕಲ್ ಗಳನ್ನು ಟ್ಯಾಟೂಗೆ ಹಾಕಲಾಗುತ್ತಿದೆ. ಇದರಿಂದ ಮನುಷ್ಯನದಲ್ಲಿ ಚರ್ಮದ ಕಾಯಿಲೆ ಸೇರಿದಂತೆ ಮತ್ತಿತರ ಸೋಂಕು ಹರಡುತ್ತಿದೆ. ಹಾಗೂ ಹೆಚ್ ಐ ವಿ ಸೋಂಕಿತರಿಗೆ ಬಳಸಿದ ಸೂಜಿಗಳನ್ನೇ ಮತ್ತೊಬ್ಬರಿಗೆ ಬಳಸುತ್ತಿರುವುದರಿಂದ ಹೆಚ್ಐವಿ ವೈರಸ್ ಮತ್ತೊಬ್ಬರಿಗೆ ತಗುಲುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ. ಈ ಹಿನ್ನೆಲೆ ಆರೋಗ್ಯ ಇಲಾಖೆ ಕ್ರಮಕ್ಕೆ ಮುಂದಾಗಿದೆ.