alex Certify BREAKING : ಜುಲೈ 7 ರಂದು ‘ಜಾರ್ಖಂಡ್’ ಮುಖ್ಯಮಂತ್ರಿಯಾಗಿ ‘ಹೇಮಂತ್ ಸೊರೆನ್’ ಪ್ರಮಾಣ ವಚನ ಸ್ವೀಕಾರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಜುಲೈ 7 ರಂದು ‘ಜಾರ್ಖಂಡ್’ ಮುಖ್ಯಮಂತ್ರಿಯಾಗಿ ‘ಹೇಮಂತ್ ಸೊರೆನ್’ ಪ್ರಮಾಣ ವಚನ ಸ್ವೀಕಾರ..!

ಜಾರ್ಖಂಡ್ : ಹೇಮಂತ್ ಸೊರೆನ್ ನೇತೃತ್ವದ ಜೆಎಂಎಂಗೆ ಸರ್ಕಾರ ರಚಿಸಲು ಆಹ್ವಾನ ನೀಡಲಾಗಿದ್ದು, ಜುಲೈ 7 ರಂದು ಜಾರ್ಖಂಡ್ ನಲ್ಲಿ ಹೇಮಂತ್ ಸೊರೆನ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಜಾರ್ಖಂಡ್ ಸಿಎಂ ಸ್ಥಾನಕ್ಕೆ ಚಂಪೈ ಸೊರೆನ್ ರಾಜೀನಾಮೆ ನೀಡಿದ್ದು, ಮತ್ತೆ ಹೇಮಂತ್ ಸೊರೆನ್ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಜಾರ್ಖಂಡ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 152 ದಿನಗಳ ಬಳಿಕ ಚಂಪೈ ಸೊರೆನ್ ಬುಧವಾರ ರಾಜೀನಾಮೆ ನೀಡಿದ್ದಾರೆ. ಅಕ್ರಮ ಭೂ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಬಂಧನದ ನಂತರ ಅಧಿಕಾರದಿಂದ ಕೆಳಗಿಳಿದ ಸುಮಾರು ಐದು ತಿಂಗಳ ನಂತರ ಹೇಮಂತ್ ಸೊರೆನ್ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಏರಲಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...