ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ ನಲ್ಲಿ ಭಾರಿ ಹಿಮಪಾತದಿಂದಾಗಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಹಲವರು ನಾಪತ್ತೆಯಾಗಿದ್ದಾರೆ.
ಬುಡಕಟ್ಟು ಮತ್ತು ಗುಡ್ಡಗಾಡು ಪ್ರದೇಶದಲ್ಲಿ ಹೊಸ ಹಿಮಪಾತ ಮತ್ತು ಮಳೆಯ ನಂತರ ಶೀತ ಅಲೆ ಮತ್ತಷ್ಟು ಉಲ್ಬಣಗೊಂಡಿದ್ದರಿಂದ ಅಧಿಕಾರಿಗಳು ಬುಧವಾರ ರಾಜ್ಯದ ಹಲವಾರು ಪ್ರದೇಶಗಳಿಗೆ ಹಿಮಪಾತದ ಎಚ್ಚರಿಕೆ ನೀಡಿದ್ದಾರೆ.
ಚಂಡೀಗಢದ ಡಿಫೆನ್ಸ್ ಜಿಯೋಇನ್ಫರ್ಮ್ಯಾಟಿಕ್ಸ್ ರಿಸರ್ಚ್ ಎಸ್ಟಾಬ್ಲಿಷ್ಮೆಂಟ್ (ಡಿಜಿಆರ್ಇ) ಗುರುವಾರದವರೆಗೆ ಲಾಹೌಲ್ ಮತ್ತು ಸ್ಪಿಟಿ, ಕಿನ್ನೌರ್, ಶಿಮ್ಲಾ, ಚಂಬಾ ಮತ್ತು ಕುಲ್ಲು ಜಿಲ್ಲೆಗಳ ಎತ್ತರದ ಪ್ರದೇಶಗಳಿಗೆ ಹಿಮಪಾತದ ಎಚ್ಚರಿಕೆ ನೀಡಿದೆ.
ಜನವರಿ 1 ರಿಂದ ರಾಜ್ಯದಲ್ಲಿ ಭೂಕುಸಿತ, ಬೆಂಕಿ ಅವಘಡದಿಂದ 61 ಜನರು ಸಾವನ್ನಪ್ಪಿದ್ದಾರೆ. ಇಬ್ಬರು ನಾಪತ್ತೆಯಾಗಿದ್ದಾರೆ. ನಾಲ್ಕು ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ಒಟ್ಟು 405 ರಸ್ತೆಗಳು ಹಿಮದಿಂದ ಮುಚ್ಚಲ್ಪಟ್ಟಿವೆ ಮತ್ತು 577 ವಿದ್ಯುತ್ ಪರಿವರ್ತಕಗಳು ಅಸ್ತವ್ಯಸ್ತಗೊಂಡಿವೆ ಎಂದು ರಾಜ್ಯ ತುರ್ತು ಪ್ರತಿಕ್ರಿಯೆ ಕೇಂದ್ರ ತಿಳಿಸಿದೆ.