ನವದೆಹಲಿ : ಹರಿಯಾಣದಲ್ಲಿ ಅಕ್ಟೋಬರ್ 1 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 4 ರಂದು ಫಲಿತಾಂಶ ಹೊರಬೀಳಲಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ.ಹರಿಯಾಣದಲ್ಲಿ 90 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ 73 ಜನರಲ್, ಎಸ್ಸಿ 17 ಕ್ಷೇತ್ರಗಳಿದೆ.
ಹರಿಯಾಣದಲ್ಲಿ 2.01 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಈ ಪೈಕಿ 1.06 ಪುರುಷರು ಹಾಗೂ 0.95 ಮಹಿಳಾ ಮತದಾರರು ಇದ್ದಾರೆ.
7,132 ನಗರ ಮತ್ತು 13,497 ಗ್ರಾಮೀಣ ಸೇರಿದಂತೆ ಒಟ್ಟು 20,629 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ. ಗುರುಗ್ರಾಮ್, ಸೋನೆಪತ್ ಮತ್ತು ಫರಿದಾಬಾದ್ನ ನಗರ ಪ್ರದೇಶಗಳಲ್ಲಿ ಬಹುಮಹಡಿ ಕಟ್ಟಡಗಳಲ್ಲಿ ಬೂತ್ಗಳನ್ನು ಸ್ಥಾಪಿಸಲಾಗುವುದು.
ಹರಿಯಾಣ ವಿಧಾನಸಭೆಯಲ್ಲಿ 73 ಸಾಮಾನ್ಯ ಮತ್ತು 17 ಪರಿಶಿಷ್ಟ ಜಾತಿ (ಎಸ್ಸಿ) ಸ್ಥಾನಗಳು ಸೇರಿದಂತೆ 90 ಸ್ಥಾನಗಳಿವೆ. 10,321 ಶತಾಯುಷಿ ಮತದಾರರು ಸಹ ಪ್ರಜಾಪ್ರಭುತ್ವ ಪ್ರಕ್ರಿಯೆಯ ಭಾಗವಾಗಲಿದ್ದಾರೆ ಎಂದು ಕುಮಾರ್ ಘೋಷಿಸಿದರು.