ಗಾಝಾ ನಗರದಲ್ಲಿ ಇಸ್ಲಾಮಿಕ್ ಗುಂಪಿನ ವೈಮಾನಿಕ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಹಮಾಸ್ ಹಿರಿಯ ಮಿಲಿಟರಿ ಕಮಾಂಡರ್ ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ.
ಕಳೆದ ಒಂದು ದಿನ ಯುದ್ಧ ವಿಮಾನಗಳು ಹಮಾಸ್ ಕಾರ್ಯಾಚರಣೆ ಕೇಂದ್ರದ ಮೇಲೆ ದಾಳಿ ನಡೆಸಿದಾಗ ಮುರಾದ್ ಅಬು ಮುರಾದ್ ಸಾವನ್ನಪ್ಪಿದ್ದಾನೆ ಎಂದು ಮಿಲಿಟರಿ ತಿಳಿಸಿದೆ.
ಕಳೆದ ಶನಿವಾರ ಗಾಝಾ ಪಟ್ಟಿಯಿಂದ ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿದಾಗಿನಿಂದ ಇಸ್ರೇಲಿಗಳು, ಪ್ಯಾಲೆಸ್ಟೀನಿಯನ್ನರು ಮತ್ತು ವಿದೇಶಿಯರು ಸೇರಿದಂತೆ ಸಾವಿರಾರು ಜನರು ಸಾವನ್ನಪ್ಪಿದ್ದಾರೆ.
ಗಾಝಾದ 2.3 ಮಿಲಿಯನ್ ಜನರಲ್ಲಿ ಅರ್ಧದಷ್ಟು ಜನರನ್ನು ಸ್ಥಳಾಂತರಿಸಲು ಇಸ್ರೇಲ್ ಮಿಲಿಟರಿ ಶುಕ್ರವಾರ ಆದೇಶ ನೀಡಿದ ನಂತರ ಸಾವಿರಾರು ಫೆಲೆಸ್ತೀನೀಯರು ತಮ್ಮ ಮನೆಗಳನ್ನು ತೊರೆದು ದಕ್ಷಿಣಕ್ಕೆ ತೆರಳಲು ಪ್ರಾರಂಭಿಸಿದರು.ಮುಂದಿನ 24 ಗಂಟೆಗಳಲ್ಲಿ ಉತ್ತರ ಗಾಝಾದಲ್ಲಿರುವ ಸುಮಾರು 1.1 ಮಿಲಿಯನ್ ಫೆಲೆಸ್ತೀನೀಯರು ಎನ್ಕ್ಲೇವ್ನ ದಕ್ಷಿಣಕ್ಕೆ ಸ್ಥಳಾಂತರಗೊಳ್ಳಬೇಕು ಎಂದು ಇಸ್ರೇಲ್ ಮಿಲಿಟರಿ ತಿಳಿಸಿದೆ ಎಂದು ವಿಶ್ವಸಂಸ್ಥೆ ಹೇಳಿದೆ.