ರಾಯಚೂರು : ಪೆನ್ನು ಕದ್ದ ಎಂಬ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಯನ್ನು ರೂಮಿನಲ್ಲಿ ಕೂಡಿ ಹಾಕಿ ಮನಬಂದಂತೆ ಥಳಿಸಿ ವಿಕೃತಿ ಮೆರೆದ ಗುರೂಜಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಾಯಚೂರಿನ ರಾಮಕೃಷ್ಣ ಆಶ್ರಮದ ಗುರೂಜಿ ಇಂತಹ ಕೃತ್ಯ ಎಸಗಿದ್ದು,ವಿದ್ಯಾರ್ಥಿಯನ್ನು ಥಳಿಸಿ, ಕೂಡಿಹಾಕಿ ಅಮಾನವೀಯವಾಗಿ ನಡೆದುಕೊಂಡಿದ್ದರು. ಈ ಹಿನ್ನೆಲೆ ವಿಕೃತ ಗುರೂಜಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶ್ರವಣ ಕುಮಾರ್ ಎಂಬ ವಿದ್ಯಾರ್ಥಿ ಹಲ್ಲೆಗೊಳಗಾಗಿದ್ದು, ಗುರೂಜಿ ಹೊಡೆದ ಏಟಿಗೆ ಬಾಲಕನ ಕಣ್ಣುಗಳು, ಮುಖ ಊದಿಕೊಂಡಿವೆ. ಆಶ್ರಮದಲ್ಲಿ ತಂಗಿದ್ದ ಶ್ರವಣ ಕುಮಾರ್ ಸಹಪಾಠಿಗಳ ಜೊತೆ ಆಟವಾಡುತ್ತ ಪೆನ್ನು ಕದ್ದಿದ್ದನಂತೆ. ಈ ವಿಚಾರವನ್ನು ಸಹಪಾಠಿಗಳು ಆಶ್ರಮದ ಗುರೂಜಿಗೆ ತಿಳಿಸಿದ್ದಾರೆ. ಆಶ್ರಮದ ಗುರೂಜಿ ವೇಣುಗೋಪಾಲ ಎಂಬುವವರು ವಿದ್ಯಾರ್ಥಿ ಶ್ರವಣ ಕುಮಾರ್ ನನ್ನು ಕರೆದು ವಿಚಾರಿಸಿ ಥಳಿಸಿದ್ದಾರೆ. 3-4 ದಿನ ಕತ್ತಲೆ ಕೋಣೆಯಲ್ಲಿ ಕೂಡಿ ಕಣ್ಣುಗುಡ್ಡೆಗಳಿಗೆ ಏಟು ಕೊಟ್ಟು ಮನಬಂದಂತೆ ಥಳಿಸಿ ವಿಕೃತಿ ಮೆರೆದಿದ್ದಾರೆ.ಪಶ್ಚಿಮ ಠಾಣೆ ಪೊಲೀಸರು ಆರೋಪಿ ಗುರೂಜಿ ವೇಣುಗೋಪಾಲನನ್ನ ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.