ಬೆಂಗಳೂರು : ರಾಜ್ಯ ಸರ್ಕಾರದಿಂದ ಜಿ.ಪಂ, ತಾಲೂಕು ಪಂಚಾಯತ್ ನೌಕರರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ವೇತನ ಪಾವತಿಗೆ ಅನುದಾನ ಬಿಡುಗಡೆ ಮಾಡಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ ಈ ಆದೇಶಕ್ಕೆ ಲಗತ್ತಿಸಿರುವ ಅನುಬಂಧದ ಕಾಲಂ 2ರ ತಾಲ್ಲೂಕು ಪಂಚಾಯತಿಗೆ ಕಾಲಂ 3 ಕಾರ್ಯಕ್ರಮದಡಿ ಬಾಕಿ/ಪ್ರಸಕ್ತ ಸಾಲಿನ ಬಾಕಿ/ಪ್ರಸಕ್ತ ಸಾಲಿನ ವೇತನ, ವೇತನೇತರ, ಹೊರಗುತ್ತಿಗೆ ನೌಕರರ ವೇತನ, ದಿನಗೂಲಿ ನೌಕರರ ಉಪದಾನ ಮತ್ತು ವೈದ್ಯಕೀಯ ವೆಚ್ಚ ಮರು ಪಾವತಿಗಾಗಿ ಅಗತ್ಯವಿರುವ ಅನುದಾನವನ್ನು ಕಾಲಂ 4ರ ಲೆಕ್ಕ ಶೀರ್ಷಿಕೆಯಡಿ ರೂ.982.36ಲಕ್ಷ (ರೂಪಾಯಿ ಒಂಬತ್ತು ನೂರ ಎಂಬತ್ತೆರಡು ಲಕ್ಷದ ಮೂವತ್ತಾರು ಸಾವಿರಗಳು ಮಾತ್ರ) ಗಳನ್ನು ಬಿಡುಗಡೆಗೊಳಿಸಿದೆ.
ಹಾಗೂ
ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ ಈ ಆದೇಶಕ್ಕೆ ಲಗತ್ತಿಸಿರುವ ಅನುಬಂಧದ ಕಾಲಂ 2ರ ಜಿಲ್ಲಾ ಪಂಚಾಯತಿಗಳಿಗೆ ಕಾಲಂ ಕಾರ್ಯಕ್ರಮದಡಿ ತೆರವಾದ ಹುದ್ದೆಗಳು ಭರ್ತಿಯಾದ್ದರಿಂದ ಅಧಿಕಾರಿ/ಸಿಬ್ಬಂದಿಯವರ ಬಾಕಿ/ಪ್ರಸಕ್ತ ಸಾಲಿನ ವೇತನ ವೇತನೇತರ ದಿನಗೂಲಿ ನೌಕರರ ಉಪದಾನ, ಹೊರಗುತ್ತಿಗೆ ನೌಕರರ ವೇತನ ಮತ್ತು ವೈದ್ಯಕೀಯ ವೆಚ್ಚ ಮರುಪಾವತಿಗಾಗಿ ಅನುದಾನವನ್ನು ಕಾಲಂ 4ರ ಲೆಕ್ಕ ಶೀರ್ಷಿಕೆಯಡಿ ರೂ.2285.27ಲಕ್ಷ (ರೂಪಾಯಿ ಎರಡು ಸಾವಿರದ ಎರಡು ನೂರ ಎಂಬತ್ತೈದು ಲಕ್ಷದ ಇಪ್ಪತ್ತೇಳು ಸಾವಿರಗಳು ಮಾತ್ರ ಬಿಡುಗಡೆ ಮಾಡಿದೆ.