ಬೆಂಗಳೂರು : ನಟ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.
ಮೂಲಗಳ ಪ್ರಕಾರ ಗೀತಾ ಶಿವಕುಮಾರ್ ಅವರಿಗೆ ಸರ್ಜರಿಯಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ . ಇದ್ದಕ್ಕಿದ್ದಂತೆ ಗೀತಾ ಅವರಿಗೆ ಏನಾಯ್ತು..? ಏನಿದು ಸರ್ಜರಿ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.
ಗೀತಾ ಅವರಿಗೆ ಸರ್ಜರಿಯಾದ ಬಗ್ಗೆ ಅವರ ಸಹೋದರ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ. ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಿನ್ನೆ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ಅವರು ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಸಚಿವರು ಈ ಸಮಾರಂಭಕ್ಕೆ ನಾನು ಬೆಳಗ್ಗೆ ಬರಬೇಕಿತ್ತು, ಆದರೆ ಬರಲು ಆಗಲಿಲ್ಲ. ಗೀತಕ್ಕ ಅವರದ್ದು ಸರ್ಜರಿ ಇತ್ತು, ಹಾಗಾಗಿ ಬರಲಿಲ್ಲ, ನಿನ್ನೆ ಇವತ್ತು 2 ದಿನ ಸರ್ಜರಿ ಇತ್ತು, ಹಾಗಾಗಿ ಬರಲಿಲ್ಲ. ಈಗ ಸರ್ಜರಿ ಮುಗಿದಿದೆ, ಅವರ ಆರೋಗ್ಯ ಸುಧಾರಿಸಿದೆ ಎಂದಿದ್ದಾರೆ.