ನವದೆಹಲಿ: ಉತ್ತರ ಪ್ರದೇಶದ ಸುಲ್ತಾನ್ಪುರದಲ್ಲಿ ನಡೆದ ಎನ್ಕೌಂಟರ್ನಲ್ಲಿ ಗ್ಯಾಂಗ್ಸ್ಟರ್ ಮತ್ತು ಶಾರ್ಪ್ ಶೂಟರ್ ವಿನೋದ್ ಕುಮಾರ್ ಉಪಾಧ್ಯಾಯನನ್ನು ಹತ್ಯೆ ಮಾಡಲಾಗಿದೆ.
ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ (ಯುಪಿ ಎಸ್ಟಿಎಫ್) ಯೊಂದಿಗಿನ ಎನ್ಕೌಂಟರ್ನಲ್ಲಿ ವಿನೋದ್ ಉಪಾಧ್ಯಾಯ ಕೊಲ್ಲಲ್ಪಟ್ಟಿದ್ದಾನೆ. ಸುಲ್ತಾನ್ಪುರದ ದೆಹತ್ ಕೊಟ್ವಾಲಿ ಪ್ರದೇಶದ ಎಸ್ಟಿಎಫ್ ಪ್ರಧಾನ ಕಚೇರಿಯ ಡಿವೈಎಸ್ಪಿ ದೀಪಕ್ ಕುಮಾರ್ ಸಿಂಗ್ ನೇತೃತ್ವದ ತಂಡ ಎನ್ ಕೌಂಟರ್ ನಡೆಸಿದೆ.
ವಿನೋದ್ ಉಪಾಧ್ಯಾಯ ವಿರುದ್ಧ ಲಕ್ನೋ ಮತ್ತು ಗೋರಖ್ಪುರ ಸೇರಿದಂತೆ ಉತ್ತರ ಪ್ರದೇಶದಾದ್ಯಂತ ಅಪಹರಣ, ದರೋಡೆ, ಸುಲಿಗೆ ಮತ್ತು ಕೊಲೆಯ ಅನೇಕ ಪ್ರಕರಣಗಳು ದಾಖಲಾಗಿವೆ. ಆತನನ್ನು ಬಂಧಿಸುವವರಿಗೆ ಗೋರಖ್ಪುರ ಪೊಲೀಸರು 1 ಲಕ್ಷ ರೂ.ಗಳ ಬಹುಮಾನವನ್ನು ಘೋಷಿಸಿದ್ದಾರೆ.