ನವದೆಹಲಿ : ಭಾರತಕ್ಕೆ ಪ್ರವಾಸಕ್ಕೆ ಬಂದಿದ್ದ ಇಂಗ್ಲೆಂಡ್ ಮೂಲದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ದೆಹಲಿಯಲ್ಲಿ ನಡೆದಿದೆ. ಸದ್ಯ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾಮಾಜಿಕ ಮಾಧ್ಯಮದ ಮೂಲಕ ಸ್ನೇಹ ಬೆಳೆಸಿದ ವ್ಯಕ್ತಿಯನ್ನು ಭೇಟಿಯಾಗಲು ರಾಜಧಾನಿಗೆ ಆಗಮಿಸಿದ ಇಂಗ್ಲೆಂಡ್ ಮೂಲದ ಯುವತಿ ಮೇಲೆ ದೆಹಲಿಯಲ್ಲಿ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಅತ್ಯಾಚಾರದ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿಯ ಮಹಿಪಾಲ್ಪುರ ಪ್ರದೇಶದ ಹೋಟೆಲ್ನಲ್ಲಿ ಈ ಘಟನೆ ನಡೆದಿದೆ. ಲೈಂಗಿಕ ಕಿರುಕುಳದ ಆರೋಪದ ಮೇಲೆ ವ್ಯಕ್ತಿಯ ಸಹಚರನನ್ನು ಸಹ ಬಂಧಿಸಲಾಗಿದೆ.ಸೋಷಿಯಲ್ ಮೀಡಿಯಾ ಮೂಲಕ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿದ್ದ ಮಹಿಳೆ ಆತನನ್ನು ಭೇಟಿಯಾಗಲು ಯುಕೆಯಿಂದ ದೆಹಲಿಗೆ ಬಂದಿದ್ದರು.ಘಟನೆಯ ಬಗ್ಗೆ ಮಾಹಿತಿಯನ್ನು ಬ್ರಿಟಿಷ್ ಹೈಕಮಿಷನ್ ಗೆ ರವಾನಿಸಲಾಗಿದೆ.