ಬೆಂಗಳೂರು : ಖಾಸಗಿ ಕಂಪನಿಯೊಂದು ಭೂಮಿ ಪಡೆದು ಉದ್ಯೋಗ ನೀಡುವುದಾಗಿ ಹೇಳಿ ಯುವ ರೈತನಿಗೆ ವಂಚಿಸಿದ್ದು, ಮನನೊಂದ ಯುವ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಅಡಕನಹಳ್ಳಿ ಬಳಿ ನಡೆದಿದೆ.
ಮೃತರನ್ನು ರೈತ ಸಿದ್ದರಾಜು ಎಂದು ಗುರುತಿಸಲಾಗಿದೆ. ಕಂಪನಿ ವಿರುದ್ಧ ಡೆತ್ ನೋಟ್ ಬರೆದು ರೈತ ಸಿದ್ದರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಾರ್ಲೆ ಆಗ್ರೋ ಇಂಡಸ್ಟ್ರೀಸ್ ಎಂಬ ಖಾಸಗಿ ಕಂಪನಿ ಸಿದ್ದರಾಜು ಬಳಿಯಿಂದ ಉದ್ಯೋಗ ನೀಡುವುದಾಗಿ ಹೇಳಿ ಭೂಮಿ ಪಡೆದಿತ್ತು. ಬಳಿಕ ಉದ್ಯೋಗ ನೀಡದೆ ವಂಚಿಸಿದೆ ಎನ್ನಲಾಗಿದೆ.
ಇದರಿಂದ ಮನನೊಂದ ಯುವ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಹಿನ್ನೆಲೆ ಸ್ಥಳೀಯರು ಹಾಗೂ ಪೋಷಕರು ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.