
ಜಮ್ಮು ಮತ್ತು ಕಾಶ್ಮೀರ : ಜಮ್ಮು ಮತ್ತು ಕಾಶ್ಮೀರದ ಪೂಂಚ್ ನ ಸಿಂಧಾರ ಪ್ರದೇಶದಲ್ಲಿ ಇಂದು ಬೆಳ್ಳಂಬೆಳಗ್ಗೆ ಭದ್ರತಾ ಪಡೆಗಳು ದಾಳಿ ನಡೆಸಿದ್ದು, ನಾಲ್ವರು ಉಗ್ರರನ್ನು ಹೊಡೆದುರುಳಿಸಿದೆ.
ಪೂಂಚ್ ನ ಸಿಂಧಾರ ಪ್ರದೇಶದಲ್ಲಿ ಇಂದು ಬೆಳಿಗ್ಗೆ ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಾಲ್ವರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ನಿನ್ನೆ ರಾತ್ರಿ 11: 30 ರ ಸುಮಾರಿಗೆ ಭದ್ರತಾ ಪಡೆಗಳು ಕಾರ್ಯಚರಣೆ ಕೈಗೊಂಡಿದ್ದರು. ಇಂದು ಬೆಳಗ್ಗೆ ನಾಲ್ವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ.
ಇಂದು ಮುಂಜಾನೆ, ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಭಾರಿ ಗುಂಡಿನ ಚಕಮಕಿಯೊಂದಿಗೆ ಎನ್ಕೌಂಟರ್ ಮತ್ತೆ ಪ್ರಾರಂಭವಾಯಿತು. ಭಾರತೀಯ ಸೇನೆಯ ವಿಶೇಷ ಪಡೆಗಳು, ರಾಷ್ಟ್ರೀಯ ರೈಫಲ್ಸ್ ಮತ್ತು ಜೆ & ಕೆ ಪೊಲೀಸ್ ಪಡೆಗಳು ಮತ್ತು ಇತರ ಪಡೆಗಳು ಕಾರ್ಯಾಚರಣೆಯ ಭಾಗವಾಗಿದ್ದವು. ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟ ಭಯೋತ್ಪಾದಕರ ಮಾಹಿತಿ ಸಂಗ್ರಹಿಸಲಾಗುತ್ತಿದೆ.