alex Certify BREAKING : ಆಸ್ಟ್ರೇಲಿಯಾದ ಸಮುದ್ರದಲ್ಲಿ ಮುಳುಗಿ ನಾಲ್ವರು ಭಾರತೀಯರು ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಆಸ್ಟ್ರೇಲಿಯಾದ ಸಮುದ್ರದಲ್ಲಿ ಮುಳುಗಿ ನಾಲ್ವರು ಭಾರತೀಯರು ಸಾವು

ಮೆಲ್ಬೋರ್ನ್ ನಿಂದ ದಕ್ಷಿಣಕ್ಕೆ 130 ಕಿ.ಮೀ ದೂರದಲ್ಲಿರುವ ಆಸ್ಟ್ರೇಲಿಯಾದ ವಿಕ್ಟೋರಿಯಾದ ಫಿಲಿಪ್ ದ್ವೀಪದ ಫಾರೆಸ್ಟ್ ಗುಹೆಗಳ ಬೀಚ್ ನಲ್ಲಿ ನಾಲ್ವರು ಭಾರತೀಯರು ಮುಳುಗಿ ಸಾವನ್ನಪ್ಪಿದ್ದಾರೆ.

ಕ್ಯಾನ್ಬೆರಾದಲ್ಲಿನ ಭಾರತೀಯ ಹೈಕಮಿಷನ್ ಗುರುವಾರ (ಜನವರಿ 25) ಈ ಘಟನೆಯನ್ನು ದೃಢಪಡಿಸಿದೆ. ಮೃತರಲ್ಲಿ 20 ವರ್ಷದ ಪುರುಷ ಮತ್ತು ಇಬ್ಬರು ಮಹಿಳೆಯರು ಮತ್ತು 40 ರ ಹರೆಯದ ಮಹಿಳೆ ಸೇರಿದ್ದಾರೆ.

ಜನವರಿ 24 ರಂದು ಮಧ್ಯಾಹ್ನ 3:30 ರ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಸಮುದ್ರ ಗುಹೆಗಳಿಗೆ ಹೆಸರುವಾಸಿಯಾದ ಜನಪ್ರಿಯ ಪ್ರವಾಸಿ ತಾಣದಲ್ಲಿ ಈ ದುರಂತ ಸಂಭವಿಸಿದೆ.  ಮಧ್ಯಾಹ್ನ 3.30 ರ ಸುಮಾರಿಗೆ ನ್ಯೂ ಹೇವನ್ ಬಳಿ ನಾಲ್ಕು ಜನರು ನೀರಿನಲ್ಲಿ ಮುಳುಗುತ್ತಿರುವುದನ್ನು  ಕಂಡು ತುರ್ತು ಸೇವಾ ಸಿಬ್ಬಂದಿ ರಕ್ಷಿಸಲು ಪ್ರಯತ್ನಿಸಿದ್ದರು, ಆದರೆ ಸಾಧ್ಯವಾಗಲಿಲ್ಲ. ನಾಲ್ವರನ್ನು ತೀರಕ್ಕೆ ಕರೆದುಕೊಂಡು ಬರುವಷ್ಟರಲ್ಲಿ ಮೃತಪಟ್ಟಿದ್ದರು ಎಂದು ಮೂಲಗಳು ತಿಳಿಸಿದೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...