ಬೆಂಗಳೂರು : ರಾಜ್ಯದಲ್ಲಿ ಕಲಬೆರಕೆ ತಡೆಗೆ ಇನ್ಮುಂದೆ ಪ್ರತಿ ತಿಂಗಳು ತಿನಿಸುಗಳ ತಪಾಸಣೆ ನಡೆಸಲಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಆಹಾರ ಪದಾರ್ಥಗಳ ಸುರಕ್ಷತೆಗೆ ನಮ್ಮ ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಪ್ರತಿ ತಿಂಗಳು ಒಂದೊಂದು ಆಹಾರ ಪದಾರ್ಥಗಳನ್ನು ಗುಣಮಟ್ಟ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಕಲಬೆರೆಕೆಯಾಗಿರುವ ಆಹಾರ ಪದಾರ್ಥ, ಅದರ ಕುರಿತು ತೆಗೆದುಕೊಂಡ ಕ್ರಮಗಳು ಎಲ್ಲದರ ಕುರಿತು ಸಾರ್ವಜನರಿಗೆ ಮಾಹಿತಿ ನೀಡಿ, ಜಾಗೃತಿ ಮೂಡಿಸುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಬೆಲ್ಲ, ಹಸಿರು ಬಟಾಣಿ, ಸೇರಿದಂತೆ ಹಲವು ಆಹಾರ ಪದಾರ್ಥಗಳಲ್ಲಿ ರಾಸಾಯನಿಕ ಬಣ್ಣವನ್ನು ಬಳಕೆ ಮಾಡಲಾಗುತ್ತಿದ್ದು,ಇದು ಆರೋಗ್ಯಕ್ಕೆ ಅಪಾಯಕಾರಿ ಎಂದು ಆರೋಗ್ಯ ಇಲಾಖೆ ವರದಿ ಧೃಡಪಡಿಸಿದೆ. ಈ ಹಿನ್ನೆಲೆ ಎಚ್ಚೆತ್ತ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ.
ಆಹಾರ ಪದಾರ್ಥಗಳ ಸುರಕ್ಷತೆಗೆ ನಮ್ಮ ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಪ್ರತಿ ತಿಂಗಳು ಒಂದೊಂದು ಆಹಾರ ಪದಾರ್ಥಗಳನ್ನು ಗುಣಮಟ್ಟ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಕಲಬೆರೆಕೆಯಾಗಿರುವ ಆಹಾರ ಪದಾರ್ಥ, ಅದರ ಕುರಿತು ತೆಗೆದುಕೊಂಡ ಕ್ರಮಗಳು ಎಲ್ಲದರ ಕುರಿತು ಸಾರ್ವಜನರಿಗೆ ಮಾಹಿತಿ ನೀಡಿ, ಜಾಗೃತಿ ಮೂಡಿಸುತ್ತೇವೆ.#foodsafety pic.twitter.com/9NvRYR8T6M
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) March 4, 2025