ನವದೆಹಲಿ : ಕನ್ವರ್ ಯಾತ್ರೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ವಿದ್ಯುತ್ ಸ್ಪರ್ಶಿಸಿ ಐವರು ಕನ್ವರ್ ಯಾತ್ರಾರ್ಥಿಗಳು ಸಾವನ್ನಪ್ಪಿರುವ ಘಟನೆ ಪಶ್ಚಿಮ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಭಾವನ್ಪುರದ ರಾಲಿ ಚೌಹಾನ್ ಗ್ರಾಮದಲ್ಲಿ ನಡೆದಿದೆ.
ಕನ್ವರ್ ಧಾರ್ಮಿಕ ಮೆರವಣಿ ವೇಳೆ ವಿದ್ಯುತ್ ಸ್ಪರ್ಶದಿಂದ ಐದು ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಇತರ ಐದು ಮಂದಿ ಗಾಯಗೊಂಡಿದ್ದಾರೆ. ಶಿವನ ನಿಷ್ಠಾವಂತ ಅನುಯಾಯಿಗಳಾದ ಕನ್ವಾರಿಯಾಗಳ ಗುಂಪಿನ ನೇತೃತ್ವದ ಮೆರವಣಿಗೆಯು ಶನಿವಾರ ಗಂಗಾ ನದಿಯ ಪವಿತ್ರ ನೀರಿನೊಂದಿಗೆ ಹರಿದ್ವಾರದಿಂದ ಹಿಂದಿರುಗುತ್ತಿತ್ತು.
ಸಂಭ್ರಮದ ಸಂಗೀತದಿಂದ ತುಂಬಿದ ಕನ್ವಾರಿಯಾಗಳನ್ನು ಹೊತ್ತ ವಾಹನವು ಹಳ್ಳಿಯನ್ನು ಪ್ರವೇಶಿಸುತ್ತಿದ್ದಂತೆ, ಕೆಳಮಟ್ಟದ ಹೈಟೆನ್ಷನ್ ಲೈನ್ ಗೆ ವಾಹನವು ಡಿಕ್ಕಿ ಹೊಡೆದ ಪರಿಣಾಮ ವಾಹನದಲ್ಲಿದ್ದ ಐವರು ಯಾತ್ರಾರ್ಥಿಗಳು ಸಾವನ್ನಪ್ಪಿದ್ದು, ಇನ್ನೂ ಐದು ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಕನ್ವರ್ ಯಾತ್ರೆ: ಭಾರತದ ಅತಿದೊಡ್ಡ ಧಾರ್ಮಿಕ ಸಭೆ
ಕನ್ವರ್ ಯಾತ್ರೆಯು ಭಾರತದಲ್ಲಿ ಮಹತ್ವದ ಧಾರ್ಮಿಕ ಸಭೆಯಾಗಿದ್ದು, ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ದೆಹಲಿ, ಹರಿಯಾಣ, ಪಂಜಾಬ್, ಮಧ್ಯಪ್ರದೇಶ, ಛತ್ತೀಸ್ಗಢ, ಒಡಿಶಾ ಮತ್ತು ಜಾರ್ಖಂಡ್ನಂತಹ ರಾಜ್ಯಗಳಿಂದ ವಾರ್ಷಿಕವಾಗಿ ಅಂದಾಜು 10 ರಿಂದ 12 ಮಿಲಿಯನ್ ಜನರು ಈ ಯಾತ್ರೆಯಲ್ಲಿ ಭಾಗಿಯಾಗುತ್ತಾರೆ.. ಕೇಸರಿ ಉಡುಪನ್ನು ಧರಿಸಿದ ಕನ್ವಾರಿಯಾಗಳು ಹೆಚ್ಚಾಗಿ ಹೆದ್ದಾರಿಗಳಲ್ಲಿ ವಾಹನಗಳ ಪಕ್ಕದಲ್ಲಿ ಬರಿಗಾಲಿನಲ್ಲಿ ನಡೆಯುತ್ತಾರೆ.
https://twitter.com/Ddhirajk/status/1680305009706115072?ref_src=twsrc%5Etfw%7Ctwcamp%5Etweetembed%7Ctwterm%5E1680305009706115072%7Ctwgr%5E%7Ctwcon%5Es1_&ref_url=https%3A%2F%2Fwww.freepressjournal.in%2Findia%2Fup-5-kanwariya-pilgrims-electrocuted-to-death-in-meerut-several-injured-disturbing-visuals-surface