alex Certify BREAKING : ಮಹಾಮಾರಿ ಡೆಂಗ್ಯೂಗೆ ಚಿಕ್ಕಮಗಳೂರಲ್ಲಿ ಮೊದಲ ಬಲಿ, ಚಿಕಿತ್ಸೆ ಫಲಿಸದೇ ಯುವತಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಮಹಾಮಾರಿ ಡೆಂಗ್ಯೂಗೆ ಚಿಕ್ಕಮಗಳೂರಲ್ಲಿ ಮೊದಲ ಬಲಿ, ಚಿಕಿತ್ಸೆ ಫಲಿಸದೇ ಯುವತಿ ಸಾವು

ಚಿಕ್ಕಮಗಳೂರು : ಮಹಾಮಾರಿ ಡೆಂಘ್ಯೂಗೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮೊದಲ ಬಲಿಯಾಗಿದೆ. ಚಿಕ್ಕಮಗಳೂರಿನ ಮಲ್ಲೇಗೌಡ ಆಸ್ಪತ್ರೆಯಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬರು ಮೃತಪಟ್ಟಿದ್ದಾರೆ.

ಮೃತರನ್ನು ಸುಹನಾ (19) ಎಂದು ಗುರುತಿಸಲಾಗಿದೆ. ಡೆಂಘ್ಯೂಯಿಂದ ಬಳಲುತ್ತಿದ್ದ ಯುವತಿಯನ್ನು ಚಿಕ್ಕಮಗಳೂರಿನ ಮಲ್ಲೇಗೌಡ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಡೆಂಗ್ಯೂ ಜ್ವರದ ಲಕ್ಷಣಗಳು

ಇದ್ದಕ್ಕಿದ್ದಂತೆ ತೀವ್ರ ಜ್ವರ
ಕಣ್ಣುಗಳ ಹಿಂಭಾಗದಿಂದ ನೋವು
ವಾಂತಿ, ವಾಕರಿಕೆ
ದೇಹ ಮತ್ತು ಕೀಲು ನೋವುಗಳು
ರಕ್ತದಲ್ಲಿ ಹೆಚ್ಚಿದ ಹೆಮಟೋಕ್ರಿಟ್ (ಹಿಮೋಗ್ಲೋಬಿನ್).
ಅದೇ ಸಮಯದಲ್ಲಿ ಪ್ಲೇಟ್ಲೆಟ್ಗಳು ವೇಗವಾಗಿ ಕುಸಿಯುತ್ತವೆ.
ಹೊಟ್ಟೆ ನೋವು, ಆಯಾಸ
ಹೊಟ್ಟೆ ಅಥವಾ ಎದೆಯಲ್ಲಿ ನೀರಿನ ಶೇಖರಣೆ
ನಿಲ್ಲದೆ ವಾಂತಿ
ಒಸಡುಗಳಂತಹ ಭಾಗಗಳಿಂದ ರಕ್ತಸ್ರಾವ
ಚರ್ಮದ ಮೇಲೆ ಕೆಂಪು ಚುಕ್ಕೆಗಳ ಕಲೆಗಳು
ರಕ್ತದೊತ್ತಡದಲ್ಲಿ ಇಳಿಕೆ, ಮೂರ್ಛೆ

ಡೆಂಗ್ಯೂ ಬರದಂತೆ ತಡೆಗಟ್ಟುವ ಕ್ರಮಗಳು

1) ಡೆಂಗ್ಯೂ ಬಂದ ನಂತರ ಬಳಲುವುದಕ್ಕಿಂತ ಸೋಂಕಿಗೆ ಒಳಗಾಗುವುದನ್ನು ತಪ್ಪಿಸುವುದು ಉತ್ತಮ.
2) ಡೆಂಗ್ಯೂವನ್ನು ಸಂಪೂರ್ಣವಾಗಿ ತಪ್ಪಿಸಬಹುದು. ಸಂಗ್ರಹಿಸಿದ ನೀರಿನಲ್ಲಿ ಡೆಂಗ್ಯೂ ಸೊಳ್ಳೆಗಳು ಬೆಳೆಯುತ್ತವೆ. ಆದ್ದರಿಂದ ಮನೆಯ ಸುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.
3) ಹಳೆಯ ಟೈರ್ ಗಳು ಮತ್ತು ಕ್ಯಾನ್ ಗಳನ್ನು ತಕ್ಷಣ ತೆಗೆದುಹಾಕಬೇಕು.
4) ವಾರಕ್ಕೊಮ್ಮೆ ನಿಮ್ಮ ಮನೆಯ ಸುತ್ತ ಕೀಟನಾಶಕಗಳನ್ನು ಸಿಂಪಡಿಸಿ
5 ) ಡೆಂಗ್ಯೂ ಸೊಳ್ಳೆಗಳು ಸಾಮಾನ್ಯವಾಗಿ ಹಗಲಿನಲ್ಲಿ ಸಕ್ರಿಯವಾಗಿರುತ್ತವೆ. ಆದ್ದರಿಂದ, ಹಗಲಿನಲ್ಲಿ ಮಲಗುವಾಗ ಹಾಸಿಗೆಗೆ ಸೊಳ್ಳೆ ಪರದೆಗಳನ್ನು ಬಳಸಬೇಕು.
6) ಸೊಳ್ಳೆಗಳು ಮನೆಯೊಳಗೆ ಪ್ರವೇಶಿಸದಂತೆ ಜಾಲರಿಯನ್ನು ಬಿಗಿಗೊಳಿಸಬೇಕು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...