ಉತ್ತರ ಪ್ರದೇಶ : ಅಯೋಧ್ಯೆ ರಾಮಮಂದಿರದ ಬಾಲರಾಮನ ಮೊದಲ ಪೂರ್ಣ ಫೋಟೋ ಬಿಡುಗಡೆ ಆಗಿದೆ.
ಕೈಯಲ್ಲಿ ಬಾಣ, ಸ್ವಸ್ತಿಕ್ ಮುದ್ರೆ , ಕೊರಳದಲ್ಲಿ ಹಾರ, ಪಾದದ ಬಳಿ ಕಮಲ ಹೂ ಇರುವ ಅದ್ಬುತವಾದ ಪೂರ್ಣವಾದ ರಾಮನ ವಿಗ್ರಹದ ಫೋಟೋ ಬಿಡುಗಡೆ ಆಗಿದೆ.
ಜ.೨೨ರಂದು ಅಯೋಧ್ಯೆ ರಾಮಮಂದಿರದಲ್ಲಿ ನಡೆಯಲಿರುವ ಪ್ರಾಣ ಪ್ರತಿಷ್ಠಾಪನೆಗೆ ಮೈಸೂರಿನ ಶಿಲ್ಪಿ ಯೋಗಿರಾಜ್ ಅರುಣ್ ಕೆತ್ತನೆ ಮಾಡಿರುವ ಮೂರ್ತಿ ಆಯ್ಕೆಯಾಗಿದೆ. ಇದಕ್ಕೆ ಯೋಗಿರಾಜ್ ಅವರ ಇಡೀ ಕುಟುಂಬ ಹಾಗೂ ಕನ್ನಡಿಗರು ಸಂತಸ ವ್ಯಕ್ತಪಡಿಸಿದ್ದಾರೆ.