ಅಮೆರಿಕದ ಅರಿಜೋನಾದಲ್ಲಿರುವ ಕಮಲಾ ಹ್ಯಾರಿಸ್ ಕಚೇರಿ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ಮಧ್ಯರಾತ್ರಿ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದ್ದು, ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರು ನಿಧಿ ಸಂಗ್ರಹಣೆ ಮತ್ತು ಪ್ರಚಾರ ಕಾರ್ಯ ನಡೆಸುತ್ತಿರುವ ನಡುವೆ ಘಟನೆ ನಡೆದಿದೆ. ರಾತ್ರಿಯ ಸಮಯದಲ್ಲಿ ಕಚೇರಿಯೊಳಗೆ ಯಾರೂ ಇರಲಿಲ್ಲ, ಅದೃಷ್ಟವಶಾತ್ ಯಾವುದೇ ದುರಂತ ಸಂಭವಿಸಿಲಿಲ್ಲ.ಟ್ರಂಪ್ ಮೇಲೆ ಎರಡನೇ ಬಾರಿಗೆ ಹತ್ಯೆ ಯತ್ನ ನಡೆದು ಒಂದು ವಾರದ ಬಳಿಕ ಈ ಘಟನೆ ಸಂಭವಿಸಿದೆ.