
ಹಾವೇರಿ : ಹಾವೇರಿಯ ಸಾತೇನಹಳ್ಳಿಯ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಭಾರಿ ಅಗ್ನಿ ದುರಂತದಲ್ಲಿ ಮತ್ತೊಬ್ಬರು ಸಾವನ್ನಪ್ಪಿದ್ದು, ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
ದ್ಯಾಮಪ್ಪ ಓಲೇಕಾರ (45), ರಮೇಶ್ ಬಾರ್ಕಿ (23) ಹಾಗೂ ಶಿವಲಿಂಗ ಅಕ್ಕಿ (25) ಎಂಬವರ ಮೃತದೇಹ ಪತ್ತೆಯಾಗಿವೆ. ಮೂವರೂ ತಾಲೂಕಿನ ಕಾಟೇನಹಳ್ಳಿ ಗ್ರಾಮದವ ರಾಗಿದ್ದು, ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಗುರುತು ಸಿಗದ ರೀತಿಯಲ್ಲಿ ಸುಟ್ಟು ಕರಕಲಾಗಿದ್ದಾರೆ.
ಸಾತೇನಹಳ್ಳಿ ಬಳಿ ಕುಮಾರ್ ಎಂಬುವವರಿಗೆ ಸೇರಿದ ಭೂಮಿಕಾ ಪಟಾಕಿ ಗೋದಾಮಿನ ಪಕ್ಕದಲ್ಲಿಯೇ ವೆಲ್ಡಿಂಗ್ ಕೆಲಸ ನಡೆಯುತ್ತಿದ್ದು, ಇದರ ಕಿಡಿಯೊಂದು ಪಟಾಕಿ ಗೋದಾಮಿಗೆ ತಗುಲಿ ಈ ಘಟನೆ ಸಂಭವಿಸಿದೆ ಎಂದು ಶಂಕಿಸಲಾಗಿದೆ.