alex Certify BREAKING : ‘ಮದ್ಯ’ ಕುಡಿಸಿ ಯುವತಿ ಮೇಲೆ ಅತ್ಯಾಚಾರ : ಬಿಜೆಪಿ ಮುಖಂಡ ‘ಜಿಮ್ ಸೋಮ’ನ ವಿರುದ್ಧ ‘FIR’ ದಾಖಲು.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ‘ಮದ್ಯ’ ಕುಡಿಸಿ ಯುವತಿ ಮೇಲೆ ಅತ್ಯಾಚಾರ : ಬಿಜೆಪಿ ಮುಖಂಡ ‘ಜಿಮ್ ಸೋಮ’ನ ವಿರುದ್ಧ ‘FIR’ ದಾಖಲು.!

ಬೆಂಗಳೂರು : ಯುವತಿಯನ್ನು ಫ್ಲ್ಯಾಟ್ ಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿರುವ ಆರೋಪದ ಮೇರೆಗೆ ಬಿಜೆಪಿ ಮುಖಂಡ ಜಿಮ್ ಸೋಮ ಅಲಿಯಾಸ್ ಸೋಮಶೇಖರ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಜಿಮ್ ಸೋಮು ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಸಂತ್ರಸ್ತ ಯುವತಿಗೆ ಆಕೆಯ ಸ್ನೇಹಿತೆ ಮೂಲಕ ಜಿಮ್ ಸೋಮು ಪರಿಚಯವಾಗಿತ್ತು, ಕಳೆದ ವರ್ಷದ ಯುವತಿಗೆ ಮದುವೆ ಕೂಡ ನಿಶ್ಚಯವಾಗಿತ್ತು. ಆದ್ದರಿಂದ ಯುವತಿ ಮದುವೆಗೆ 6 ಲಕ್ಷ ಸಾಲ ಕೇಳಿದ್ದಾಳೆ.

ಕಳೆದ ವರ್ಷ ಅಕ್ಟೋಬರ್ ನಲ್ಲಿ ಯುವತಿಯನ್ನು ತನ್ನ ಫ್ಲ್ಯಾಟ್ ಗೆ ಕರೆದೊಯ್ದ ಈತ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರು ನೀಡಿದ್ದಾಳೆ. ಘಟನೆ ನಡೆದು 3 ತಿಂಗಳ ಬಳಿಕ ಸಂತ್ರಸ್ತೆ ಜಿಮ್ ಸೋಮು ವಿರುದ್ಧ ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಸದ್ಯ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...